ETV Bharat / bharat

7 ವರ್ಷಗಳ ನಂತರ ದಲಾಯಿ ಲಾಮಾ ಭೇಟಿಯಾದ 17ನೇ ಕರ್ಮಪಾ ಒಗ್ಯೆನ್ ಟ್ರಿನ್ಲೆ ದೋರ್ಜಿ - Dalai Lama

17ನೇ ಕರ್ಮಪಾ ಒಗ್ಯೆನ್ ಟ್ರಿನ್ಲೆ ದೋರ್ಜಿ ಅವರು ಸ್ವಿಟ್ಜರ್​ಲೆಂಡ್​ನ ಜ್ಯೂರಿಚ್​ನಲ್ಲಿ ದಲೈ ಲಾಮಾ ಅವರನ್ನು ಭೇಟಿಯಾದರು.

ದಲಾಯಿ ಲಾಮಾ ಭೇಟಿಯಾದ 17ನೇ ಕರ್ಮಪಾ ಒಗ್ಯೆನ್ ಟ್ರಿನ್ಲೆ ದೋರ್ಜಿ
ದಲಾಯಿ ಲಾಮಾ ಭೇಟಿಯಾದ 17ನೇ ಕರ್ಮಪಾ ಒಗ್ಯೆನ್ ಟ್ರಿನ್ಲೆ ದೋರ್ಜಿ (IANS)
author img

By ETV Bharat Karnataka Team

Published : Aug 26, 2024, 4:48 PM IST

ಧರ್ಮಶಾಲಾ: ಸುದೀರ್ಘಾವಧಿಯ ಅಂತರದ ನಂತರ ಟಿಬೆಟಿಯನ್ ಧಾರ್ಮಿಕ ಮುಖ್ಯಸ್ಥ ಮತ್ತು 17ನೇ ಕರ್ಮಪಾ ಒಗ್ಯೆನ್ ಟ್ರಿನ್ಲೆ ದೋರ್ಜಿ ಅವರು ಸ್ವಿಟ್ಜರ್​ಲೆಂಡ್​ನ ಜ್ಯೂರಿಚ್​ನಲ್ಲಿ ದಲೈ ಲಾಮಾ ಅವರನ್ನು ಭೇಟಿಯಾದರು. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಟಿಬೆಟ್ ಒಳಗೆ ಮತ್ತು ಹೊರಗಿನ ಟಿಬೆಟಿಯನ್ ಜನರ ಪ್ರಾತಿನಿಧಿಕ ಸಂಸ್ಥೆಯಾದ ಸೆಂಟ್ರಲ್ ಟಿಬೆಟಿಯನ್ ಅಡ್ಮಿನಿಸ್ಟ್ರೇಷನ್ (ಸಿಟಿಎ) ಸೋಮವಾರ ಈ ಸಭೆಯ ಫೋಟೋಗಳನ್ನು ಹಂಚಿಕೊಂಡಿದೆ.

ಜನವರಿ 2017 ರ ನಂತರ ಇದೇ ಮೊದಲ ಬಾರಿಗೆ ಆಗಸ್ಟ್ 25 ರಂದು ಸಭೆ ನಡೆದಿದೆ. ಈ ಸಭೆಯು ದಲೈ ಲಾಮಾ ಮತ್ತು ಪಂಚೆನ್ ಲಾಮಾ ನಂತರ ಬೌದ್ಧ ಸಮುದಾಯದ ಮೂರನೇ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ಕರ್ಮಪಾ ಅವರು ಶೀಘ್ರದಲ್ಲೇ ಭಾರತಕ್ಕೆ ಮರಳಬಹುದು ಎಂಬ ಭರವಸೆಯನ್ನು ಮೂಡಿಸಿದೆ. ಕರ್ಮಪಾ ಅವರಿಗೆ ಭಾರತದಲ್ಲಿ, ವಿಶೇಷವಾಗಿ ಸಿಕ್ಕಿಂನಲ್ಲಿ ದೊಡ್ಡ ಸಂಖ್ಯೆಯ ಅನುಯಾಯಿಗಳಿದ್ದಾರೆ.

ದಲೈ ಲಾಮಾ ಮತ್ತು ಕರ್ಮಪಾ ಈ ಹಿಂದೆ ಕೊನೆಯ ಬಾರಿಗೆ 2017 ರಲ್ಲಿ ಬೋಧಗಯಾದಲ್ಲಿ 34 ನೇ ಕಾಲಚಕ್ರ ಬೋಧನೆಗಳ ಸಮಯದಲ್ಲಿ ಭೇಟಿಯಾಗಿದ್ದರು.

1959 ರಲ್ಲಿ, ದಲೈ ಲಾಮಾ ಮತ್ತು ಇತರ ಸಾವಿರಾರು ಜನ ಟಿಬೆಟ್​ನಿಂದ ಪಲಾಯನ ಮಾಡಿ, ಹಿಮಾಲಯವನ್ನು ದಾಟಿ ಧರ್ಮಶಾಲಾದಲ್ಲಿ ಆಶ್ರಯ ಪಡೆದಿದ್ದಾರೆ. ಕರ್ಮಪಾ ಕೂಡ ಟಿಬೆಟ್ ನಿಂದ ಪಲಾಯನ ಮಾಡಿ ಜನವರಿ 2000 ರಲ್ಲಿ ಭಾರತದಲ್ಲಿ ಆಶ್ರಯ ಪಡೆದರು. ಅವರು ಹೆಚ್ಚಾಗಿ ಧರ್ಮಶಾಲಾ ಬಳಿಯ ಸಿದ್ಬಾರಿಯಲ್ಲಿರುವ ಮಠದಲ್ಲಿ ವಾಸಿಸುತ್ತಾರೆ. ಭಾರತ ಸರ್ಕಾರವು ಅವರನ್ನು 'ಗೌರವಾನ್ವಿತ ಅತಿಥಿ' ಎಂದು ಪರಿಗಣಿಸಿದೆ.

ಕರ್ಮಪಾ 2017 ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಯುಎಸ್​ಗೆ ತೆರಳಿದರು ಮತ್ತು ನಂತರ ಕಾಮನ್ವೆಲ್ತ್ ಆಫ್ ಡೊಮಿನಿಕಾದ ಪೌರತ್ವವನ್ನು ಪಡೆದರು. ದಲೈ ಲಾಮಾ (89) ಮತ್ತು ಕರ್ಮಪಾ (38) ವಿಭಿನ್ನ ಸಮಯಗಳಲ್ಲಿ ಟಿಬೆಟ್​ನಿಂದ ತಪ್ಪಿಸಿಕೊಂಡಿರುವುದು ಅವರು ಧಾರ್ಮಿಕ ವ್ಯಕ್ತಿಗಳಿಗಿಂತ ಹೆಚ್ಚಿನ ಮಹತ್ವವನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ ಮತ್ತು ಅವರ ಉಪಸ್ಥಿತಿಯು ಟಿಬೆಟ್​ ಜನತೆಯ ಹೋರಾಟಕ್ಕೆ ಬಲ ನೀಡುತ್ತದೆ ಎಂಬುದು ಅವರ ಅನುಯಾಯಿಗಳ ಅಭಿಪ್ರಾಯವಾಗಿದೆ.

ಜೂನ್​ನಲ್ಲಿ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ಸಂಪರ್ಕಿಸಿ 17 ನೇ ಕರ್ಮಪರನ್ನು ಸಿಕ್ಕಿಂಗೆ ಕರೆತರುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಸಿದ್ದರು.

ಇದನ್ನೂ ಓದಿ : ಜಮ್ಮು & ಕಾಶ್ಮೀರ ಚುನಾವಣೆ: 44 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಹಿಂಪಡೆದ ಬಿಜೆಪಿ - J and K polls

ETV Bharat Logo

Copyright © 2024 Ushodaya Enterprises Pvt. Ltd., All Rights Reserved.