ETV Bharat / bharat

ಪ್ರತ್ಯೇಕ ಅಪಘಾತ; ಒಂದೇ ದಿನದಲ್ಲಿ 12 ಜನ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

ಆಂಧ್ರಪ್ರದೇಶದಲ್ಲಿ ವಿವಿಧ ಸ್ಥಳಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಟ್ಟ 12 ಜನ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

author img

By ETV Bharat Karnataka Team

Published : Feb 26, 2024, 2:46 PM IST

people died  road accidents in AP  ಪ್ರತ್ಯೇಕ ಅಪಘಾತ  ಜನ ಸಾವು  ಹಿಟ್​ ಆ್ಯಂಡ್​ ರನ್
ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ಅಪಘಾತ, 12 ಜನ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

ಅಮರಾವತಿ(ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಅನ್ನಮಯ್ಯ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಕಾಕಿನಾಡ ಜಿಲ್ಲೆಯಲ್ಲಿ ಎಪಿಎಸ್​ಆರ್​​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಮತ್ತೊಂದು ಘಟನೆಯಲ್ಲಿ ಕರ್ನಾಟಕ ಗಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕರ್ನೂಲ್ ಜಿಲ್ಲೆಯ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಸ್ಥಳದಲ್ಲೇ ಐವರು ಸಾವು: ಅನ್ನಮಯ್ಯ ಜಿಲ್ಲೆಯ ಮದನಪಲ್ಲಿಯಲ್ಲಿ ಭಾನುವಾರ ರಾತ್ರಿ ಕಾರೊಂದು ಅವಾಂತರ ಸೃಷ್ಟಿಸಿದೆ. ಈ ಕಾರು ಕೆಲವೇ ಸೆಕೆಂಡುಗಳಲ್ಲಿ ಎರಡು ಅಪಘಾತಗಳನ್ನು ಉಂಟುಮಾಡಿದ್ದು, ರೈತರಿಬ್ಬರು ಮತ್ತು ಮೂವರು ಯುವಕರು ಸೇರಿ ಐವರು ಸ್ಥಳದಲ್ಲೇ ಸಾವನ್ನಪ್ಪಿದರು. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ: ಮದನಪಲ್ಲಿ ಗ್ರಾಮಾಂತರ ತಾಲೂಕಿನ ದೇವತಾನಗರದ ನಿವಾಸಿ ವಿಕ್ರಂ ಅವರು ಅಮೆರಿಕದಲ್ಲಿ ನೆಲೆಸಿದ್ದರು. ವಿಕ್ರಂ ಅವರು ತಮ್ಮ ಐವರು ಸ್ನೇಹಿತರೊಂದಿಗೆ ಕರ್ನಾಟಕದ ಚಿಂತಾಮಣಿಗೆ ತೆರಳಿದ್ದರು. ಕಾರಿನಲ್ಲಿ ವಾಪಸ್​ ಬರುವಾಗ ಮದನಪಲ್ಲಿ ಪೇಟೆಯಿಂದ 9 ಕಿ.ಮೀ ದೂರದ ಕರ್ನಾಟಕ ಗಡಿಭಾಗವಾದ ಬಾರ್ಲಪಲ್ಲಿ ತಲುಪಿದಾಗ ಎದುರಿಗೆ ಬರುತ್ತಿದ್ದ ಕಾರನ್ನು ತಪ್ಪಿಸುವ ಭರದಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ರೈತರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ರೈತರಾದ ಚಂದ್ರು (50) ಮತ್ತು ಸುಬ್ರಹ್ಮಣ್ಯಂ ಆಚಾರಿ (62) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಕ್ರಂ ಅವರು ಈ ಅಪಘಾತದಿಂದ ಪಾರಾಗಿ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ವಾಹನದ ನಿಯಂತ್ರಣ ಕಳೆದುಕೊಂಡ ವಿಕ್ರಂ ಬೋರ್‌ವೆಲ್ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ಕಾರಿನ ಮೇಲ್ಭಾಗದ ಜೊತೆ ವಾಹನ ಚಲಾಯಿಸುತ್ತಿದ್ದ ವಿಕ್ರಂ (35) ಅವರ ತಲೆ ಹಾರಿಹೋಗಿದೆ. ಮೃತರನ್ನು ಮದನಪಲ್ಲಿಯ ಅಮ್ಮಚೆರುವುಮಿತ್ತದ ತಿಲಕ್ (19) ಮತ್ತು ತಟ್ಟಿವಾರಿಪಲ್ಲಿಯ ಶ್ರೀನಾಥ್ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೀರುಗಟ್ಟುವಾರಿಪಲ್ಲಿಯ ಚರಣ್ (25), ರಾಮರಾವ್ ಕಾಲೋನಿಯ ಹರೀಶ್ (33) ಮತ್ತು ಮಹೇಶ್ (31) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮದನಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ರೈತರು ಸಾವಿಗೀಡಾಗಿದ್ದಕ್ಕೆ ಬಾರ್ಲಪಲ್ಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಪಿಯಲ್ಲಿ ಗುಣಮಟ್ಟದ ಮದ್ಯ ದೊರೆಯದ ಕಾರಣ ಆ ರಾಜ್ಯದ ವ್ಯಸನಿಗಳು ತಮ್ಮ ರಾಜ್ಯಕ್ಕೆ ಬಂದು ಕುಡಿದು ಅಪಘಾತಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ಹಿಟ್​ ಆ್ಯಂಡ್​ ರನ್​, ನಾಲ್ವರು ಸಾವು: ಕಾಕಿನಾಡ ಜಿಲ್ಲೆಯ ಪ್ರಟ್ಟಿಪಾಡು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟೈರ್ ಪಂಕ್ಚರ್ ಹಾಕುತ್ತಿದ್ದ ವೇಳೆ ಲಾರಿಗೆ ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರ ಪ್ರಕಾರ, ಒಡಿಶಾ ರಾಜ್ಯದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದ ಲಾರಿಯ ಹಿಂಬದಿಯ ಟೈರ್ ಸ್ಫೋಟಗೊಂಡಿದೆ. ಇದನ್ನು ಗಮನಿಸಿದ ಚಾಲಕ ಪಡಲೆಮ್ಮ ದೇವಸ್ಥಾನದ ಬಳಿ ರಸ್ತೆ ಬದಿ ಲಾರಿಯನ್ನು ನಿಲ್ಲಿಸಿದ್ದಾನೆ. ಟೈರ್ ಪಂಕ್ಚರ್ ಹಾಕುತ್ತಿದ್ದಾಗ APSRTC ಬಸ್ ಸ್ಥಳೀಯರ ಮೇಲೆ ಹರಿದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಆರ್​ಟಿಸಿ ಚಾಲಕ ಬಸ್ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಕೂಡಲೇ ಅಪಘಾತ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರನ್ನು ಬಾಪಟ್ಲಾ ಜಿಲ್ಲೆಯ ನಕ್ಕ ಬೊಕ್ಕಲ ಪಾಲೆಂ ಗ್ರಾಮದ ದಾಸರಿ ಪ್ರಸಾದ್, ದಾಸರಿ ಕಿಶೋರ್, ಕ್ಲೀನರ್ ನಾಗಯ್ಯ ಮತ್ತು ಸ್ಥಳೀಯರಾದ ರಾಜು ಎಂದು ಗುರುತಿಸಲಾಗಿದೆ.

ಕರ್ನಾಟಕದ ಗಡಿಯಲ್ಲಿ ಅಪಘಾತ: ಕರ್ನಾಟಕ ಗಡಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನೂಲ್ ಜಿಲ್ಲೆಯ ಮೂವರು ನಿವಾಸಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದ ದಾವಣಗೆರೆಯಲ್ಲಿ ಟೆಂಪೋ ವಾಹನವೊಂದು ಟೈರ್ ಪಂಕ್ಚರ್ ಆಗಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಕರ್ನೂಲು ಜಿಲ್ಲೆಯ ಪೆದಕಡುಬೂರು ತಾಲೂಕಿನ ನಾಗಲಾಪುರದ ಮಸ್ತಾನ್ ಮತ್ತು ಪೆದ್ದ ವೆಂಕಣ್ಣ ಎಂಬುವರು ಸಾವನ್ನಪ್ಪಿದ್ದು, ಮಂತ್ರಾಲಯ ತಾಲೂಕಿನ ಶಿಂಗರಾಜನಹಳ್ಳಿಯ ಈರಣ್ಣ ಎಂಬುವರು ಸಹ ಪಟ್ಟಿದ್ದಾರೆ. ಕರ್ನಾಟಕದ ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಮಾರಾಟ ಮಾಡಲು ಜಿಲ್ಲೆಯಿಂದ ಮೆಣಸಿನಕಾಯಿ ಒಯ್ಯುತ್ತಿದ್ದರು. ಈ ವೇಳೆ ಟೆಂಪೋದಲ್ಲಿ ಮೆಣಸಿನಕಾಯಿ ಲೋಡ್ ತುಂಬಿಕೊಂಡು ಬ್ಯಾಡಗಿ ಮಾರುಕಟ್ಟೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

40 ಕಾರ್ಮಿಕರಿಗೆ ಗಾಯ: ಅನಂತಪುರಂ ಜಿಲ್ಲೆಯಲ್ಲಿ 40 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬೊಲೆರೋ ಗೂಡ್ಸ್​ ವಾಹನ ಪಲ್ಟಿಯಾಗಿದೆ. ಪರಿಣಾಮ 40 ಮಂದಿ ಗಾಯಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಉರವಕೊಂಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಜ್ರಕರೂರಿನಿಂದ ಪಾಲ್ತೂರಿಗೆ ಕಾಳುಮೆಣಸಿನ ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರು ಬೊಲೆರೋ ಗೂಡ್ಸ್​ ವಾಹನದಲ್ಲಿ ತೆರಳುತ್ತಿದ್ದರು. ಉರವಕೊಂಡ ತಲುಪಿದಾಗ ಅವರ ವಾಹನದ ಹಿಂಬದಿ ಟೈರ್ ಬ್ಲಾಸ್ಟ್​ ಆಗಿ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತವಾದ ತಕ್ಷಣ ಆಂಬ್ಯುಲೆನ್ಸ್‌ಗೆ ಮಾಹಿತಿ ನೀಡಲಾಯಿತು. ಆದ್ರೆ ಸಮಯ ಕಳೆದ್ರೂ ಆಂಬ್ಯುಲೆನ್ಸ್​ ಬರಲಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು. 108 ವಾಹನಕ್ಕಾಗಿ ಕಾದು ಕುಳಿತರೂ ಪ್ರಯೋಜನವಾಗದ ಹಿನ್ನೆಲೆ ಸ್ಥಳೀಯರು ಖಾಸಗಿ ವಾಹನಗಳ ಮೂಲಕ ಉರವಕೊಂಡ ಆಸ್ಪತ್ರೆಗೆ ಕರೆದೊಯ್ದರು. ಈ ಅಪಘಾತದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಐವರನ್ನು ಉತ್ತಮ ಚಿಕಿತ್ಸೆಗಾಗಿ ಉರವಕೊಂಡ ಸರ್ಕಾರಿ ಆಸ್ಪತ್ರೆಯಿಂದ ಅನಂತಪುರಕ್ಕೆ ರವಾನಿಸಲಾಗಿದೆ.

ಓದಿ: ತೀವ್ರಗೊಂಡ ಮರಾಠ ಮೀಸಲಾತಿ ಪ್ರತಿಭಟನೆ: ಸರ್ಕಾರಿ ಬಸ್‌ಗೆ ಬೆಂಕಿ, ಕರ್ಫ್ಯೂ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.