ಕೊಚ್ಚಿನ್: ಕೇರಳ ಸರ್ಕಾರದ ಪರವಾಗಿ ಲಾಟರಿ ಇಲಾಖೆಯು ಕೇರಳದ 'ಪೂಜಾ ಬಂಪರ್ ಬಿಆರ್-100' ಲಕ್ಕಿ ಡ್ರಾ ಫಲಿತಾಂಶ ಇಂದು ಪ್ರಕಟವಾಗಲಿದೆ. ತಿರುವನಂತಪುರಂನ ಬೇಕರಿ ಜಂಕ್ಷನ್ ಬಳಿಯ ಗೋರ್ಕಿ ಭವನದಲ್ಲಿ, ಪೂಜಾ ಬಂಪರ್ ಬಿಆರ್- 100 ಫಲಿತಾಂಶ ಡ್ರಾ ಆಗಲಿದೆ.
ಏನಿದು ಬಿಆರ್- 100 ಲಾಟರಿ: ಅಕ್ಟೋಬರ್ 9 ರಂದು ಕೇರಳದ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಅವರು ಅಧಿಕೃತವಾಗಿ ಈ ಲಾಟರಿ ಪರಿಚಯಿಸಿದ್ದರು. 12 ಕೋಟಿ ಮೊತ್ತದ ಬಹುಮಾನವನ್ನು ಈ ಲಾಟರಿ ಹೊಂದಿದೆ. ಇಲ್ಲಿಯವರೆಗೆ 40 ಲಕ್ಷ ಟಿಕೆಟ್ಗಳನ್ನು ಲಾಟರಿಯಲ್ಲಿ ವಿತರಿಸಲಾಗಿದೆ. ಒಂದು ಟಿಕೆಟ್ನ ಮೊತ್ತ 300 ರೂ. ಆಗಿತ್ತು.
ಈ ಟಿಕೆಟ್ ಮೊದಲ ಬಹುಮಾನದ ಮೊತ್ತ 12 ಕೋಟಿಯಾಗಿದ್ದು, ಎಲ್ಲಾ ಸೀರಿಸ್ನ ಸಂಖ್ಯೆ ಹೊಂದಿರುವ ಒಬ್ಬ ವಿಜೇತನಿಗೆ ಮಾತ್ರ ಈ ಬೃಹತ್ ಮೊತ್ತದ ಹಣ ಕೈಸೇರಲಿದೆ. ಪೂಜಾ ಬಂಪರ್ ಲಾಟರಿಯ ಮತ್ತೊಂದು ವಿಶೇಷ ಎಂದರೆ ಎರಡನೇ ಬಹುಮಾನ ಐದು ಸೀರಿಸ್ ಅಂಕಿಗೆ 1 ಕೋಟಿ ರೂಪಾಯಿ ಮೊತ್ತ ಸಿಗಲಿದೆ. ಇನ್ನು ಮೂರನೇ ಬಹುಮಾನ ಇಬ್ಬರಿಗೆ ಎರಡು ಸೀರಿಸ್ 10 ಲಕ್ಷ ಮೊತ್ತ ಇದೆ. ಐದನೇ ಬಹುಮಾನ 2 ಲಕ್ಷ ರೂ. ಆಗಿದೆ. ಹಾಗೇ 5000, 1000, 500 ಮತ್ತು 300 ರೂ.ನ ಹಲವು ಸಮಾಧಾನಕರ ಬಹುಮಾನಗಳನ್ನು ಸಹ ಘೋಷಿಸಲಾಗುತ್ತದೆ.
ಇದನ್ನೂ ಓದಿ: ಒಂದೇ ಕುಟುಂಬದ ಮೂವರನ್ನು ಇರಿದು ಹತ್ಯೆ ಮಾಡಿದ ಅಪರಿಚಿತ: ಬೆಚ್ಚಿ ಬಿದ್ದ ಮಹಾನಗರಿ ಜನ