ETV Bharat / bharat

ಸ್ವಾಮಿನಾಥನ್ ಆಯೋಗದ ಪ್ರಮುಖ 10 ಶಿಫಾರಸುಗಳು ಹೀಗಿವೆ

2004 ರಿಂದ 2006ನೇ ಇಸ್ವಿಯ ಅವಧಿಯಲ್ಲಿ ಸ್ವಾಮಿನಾಥನ್ ಆಯೋಗ ಐದು ವರದಿಗಳನ್ನು ಸಲ್ಲಿಸಿತ್ತು. ಈ ವರದಿಗಳಲ್ಲಿ ಸ್ವಾಮಿನಾಥನ್ ಆಯೋಗ ಹಲವು ಶಿಫಾರಸುಗಳನ್ನು ಮಾಡಿತ್ತು. ಅದರಲ್ಲಿ ಕೆಲ ಪ್ರಮುಖ ಅಂಶಗಳನ್ನು ನೋಡುವುದಾದರೆ,

10 Key Recommendations of the Swaminathan Commission
ಸ್ವಾಮಿನಾಥನ್ ಆಯೋಗದ ಪ್ರಮುಖ 10 ಶಿಫಾರಸುಗಳು ಹೀಗಿವೆ
author img

By ETV Bharat Karnataka Team

Published : Feb 14, 2024, 10:12 AM IST

ಹೈದರಾಬಾದ್: ಪ್ರೊ.ಎಂ.ಎಸ್.ಸ್ವಾಮಿನಾಥನ್ ಅವರ ಅಧ್ಯಕ್ಷತೆಯ ರಾಷ್ಟ್ರೀಯ ರೈತರ ಆಯೋಗವು ಡಿಸೆಂಬರ್ 2004 ಮತ್ತು ಅಕ್ಟೋಬರ್ 2006 ರ ನಡುವೆ ಐದು ವರದಿಗಳನ್ನು ಸಲ್ಲಿಸಿತ್ತು. ಅಂತಿಮ ವರದಿಯು ರೈತರ ಸಂಕಷ್ಟ ಮತ್ತು ರೈತರ ಆತ್ಮಹತ್ಯೆಗಳ ಹೆಚ್ಚಳದ ಕಾರಣಗಳನ್ನು ಪಟ್ಟಿ ಮಾಡಿ ಆ ಬಗ್ಗೆ ವರದಿಯಲ್ಲಿ ಹೇಳಿತ್ತು. ಸಮಗ್ರ ರಾಷ್ಟ್ರೀಯ ನೀತಿಯ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಆಯೋಗವು ಹಲವು ಶಿಫಾರಸುಗಳನ್ನು ಕೂಡಾ ಮಾಡಿತ್ತು.

ಸ್ವಾಮಿನಾಥನ್ ಆಯೋಗದ 10 ಪ್ರಮುಖ ಶಿಫಾರಸುಗಳು:

1. ಬೆಳೆ ಮತ್ತು ಜಾನುವಾರುಗಳಿಗೆ ಭೂಮಿ ಪ್ರವೇಶದ ಮೂಲ ಸಮಸ್ಯೆಯನ್ನು ಪರಿಹರಿಸಲು ಭೂ ಸುಧಾರಣೆಗಳು ಅವಶ್ಯಕ ಎಂದು ಪ್ರತಿಪಾದಿಸಿತ್ತು. ಮತ್ತು ಹೆಚ್ಚುವರಿ ಮತ್ತು ಪಾಳುಭೂಮಿಗಳನ್ನು ವಿತರಣೆ ಮಾಡುವಂತೆ ಸಲಹೆ ಮಾಡಿತ್ತು

2. ವಿಶೇಷವಾಗಿ ನೀರಾವರಿ, ಒಳಚರಂಡಿ, ಭೂ ಅಭಿವೃದ್ಧಿ, ಜಲ ಸಂರಕ್ಷಣೆ, ಸಂಶೋಧನೆ ಅಭಿವೃದ್ಧಿ ಮತ್ತು ರಸ್ತೆ ಸಂಪರ್ಕದಲ್ಲಿ ಕೃಷಿ -ಸಂಬಂಧಿತ ಮೂಲಸೌಕರ್ಯಗಳಲ್ಲಿ ಸಾರ್ವಜನಿಕ ಹೂಡಿಕೆಯಲ್ಲಿ ಗಣನೀಯ ಹೆಚ್ಚಳಕ್ಕೆ ಶಿಫಾರಸು

3. ಮಣ್ಣಿನ ಆರೋಗ್ಯ, ನೀರಿನ ಪ್ರಮಾಣ, ಗುಣಮಟ್ಟ ಮತ್ತು ಜೀವವೈವಿಧ್ಯತೆ ಸಂರಕ್ಷಿಸಲು ಮತ್ತು ಸುಧಾರಿಸಲು ಕೃಷಿ ಕುಟುಂಬಗಳಿಗೆ ಸಹಾಯ ಮಾಡುವ ಸಂರಕ್ಷಣಾ ಕೃಷಿಯ ಪ್ರಚಾರದ ಅಗತ್ಯತೆಯನ್ನು ಒತ್ತಿ ಹೇಳಲಾಗಿತ್ತು.

4. ಸರ್ಕಾರದ ಬೆಂಬಲದೊಂದಿಗೆ ಬೆಳೆ ಸಾಲದ ಬಡ್ಡಿ ದರವನ್ನು 4 ಪ್ರತಿಶತಕ್ಕೆ ಇಳಿಸಲು ಸಲಹೆ ನೀಡಲಾಗಿತ್ತು.

5. ದೇಶಾದ್ಯಂತ ಕಡಿಮೆ ಪ್ರೀಮಿಯಂಗಳೊಂದಿಗೆ ಎಲ್ಲ ಬೆಳೆಗಳನ್ನು ಕವರ್ ಮಾಡಲು ಬೆಳೆ ವಿಮಾ ರಕ್ಷಣೆ ಯೋಜನೆ ವಿಸ್ತರಿಸುವಂತೆ ಶಿಫಾರಸು. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಗ್ರಾಮೀಣ ವಿಮಾ ಅಭಿವೃದ್ಧಿ ನಿಧಿಯನ್ನು ರಚಿಸುವಂತೆ ಹೇಳಲಾಗಿತ್ತು.

6. ಸಾರ್ವತ್ರಿಕ ಸಾರ್ವಜನಿಕ ವಿತರಣೆಯನ್ನು ಜಾರಿಗೊಳಿಸಿ, ಪಂಚಾಯತ್‌ಗಳು ಮತ್ತು ಸ್ಥಳೀಯ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಜೀವನ - ಚಕ್ರದ ಆಧಾರದ ಮೇಲೆ ಪೌಷ್ಟಿಕಾಂಶ ಬೆಂಬಲ ಕಾರ್ಯಕ್ರಮಗಳ ವಿತರಣೆಯನ್ನು ಮರುಸಂಘಟಿಸುವಂತೆ ಶಿಫಾರಸು ಮಾಡಲಾಗಿತ್ತು.

7. ಎಲ್ಲೆಡೆ ಧಾನ್ಯ ಮತ್ತು ನೀರನ್ನು ಸಂಗ್ರಹಿಸಿ' ಎಂಬ ತತ್ವದ ಆಧಾರದ ಮೇಲೆ ಮಹಿಳಾ ಸ್ವ-ಸಹಾಯ ಗುಂಪುಗಳು (SHG) ನಿರ್ವಹಿಸುವ ಸಮುದಾಯ ಆಹಾರ ಮತ್ತು ನೀರಿನ ಬ್ಯಾಂಕ್‌ಗಳ ಸ್ಥಾಪನೆ ಉತ್ತೇಜಿಸಲು ಆದ್ಯತೆ ನೀಡುವಂತೆ ಸಲಹೆ

8. ರೈತರ ಸಮಸ್ಯೆಗಳಿಗೆ ಕ್ರಿಯಾಶೀಲ ಸರ್ಕಾರದ ಸ್ಪಂದನೆ ಮತ್ತು ರೈತರ ಪ್ರಾತಿನಿಧ್ಯದೊಂದಿಗೆ ರಾಜ್ಯ ಮಟ್ಟದ ರೈತ ಆಯೋಗವನ್ನು ಸ್ಥಾಪಿಸುವಂತೆ ಸೂಚನೆ

9. ರೈತರ ಸಂಕಷ್ಟದ ಹಾಟ್‌ಸ್ಪಾಟ್‌ಗಳಲ್ಲಿ ಗ್ರಾಮ ಜ್ಞಾನ ಕೇಂದ್ರಗಳನ್ನು (ವಿಕೆಸಿ)ಸ್ಥಾಪಿಸಲು ಶಿಫಾರಸು ಮಾಡಲಾಗಿತ್ತು.

10. MSP ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಶೇ 50ರಷ್ಟು ಹೆಚ್ಚಿರಬೇಕು ಎಂದು ಸ್ವಾಮಿನಾಥನ್ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿತ್ತು

ಇದನ್ನು ಓದಿ:ದೆಹಲಿ ಚಲೋ ಹೋರಾಟ: ಭೋಪಾಲ್‌ನಲ್ಲಿ ಕರ್ನಾಟಕದ ರೈತರು ಪೊಲೀಸ್​ ವಶಕ್ಕೆ, ಉಜ್ಜಯಿನಿಗೆ ಸ್ಥಳಾಂತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.