ಗುಜರಾತ್: ದೇವಾಲಯಕ್ಕೆ ತೆರಳಿದ್ದ ಮಹಿಳೆಯ ಮೇಲೆ ಹೈನಾ ದಾಳಿ - ದೇವಲಯಕ್ಕೆ ತೆರಳಿದ್ದ ಮಹಿಳೆಯ ಮೇಲೆ ಹೈನಾ ದಾಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15859450-thumbnail-3x2-bng.jpeg)
ಸಬರಕಾಂತ್(ಗುಜರಾತ್): ಎಡರ್ ತಾಲೂಕಿನ ಪಟಾಡಿಯಾ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಕಾಡುಪ್ರಾಣಿ ದಾಳಿ ಮಾಡಿದೆ. ಮಹಾಕಾಳಿ ದೇವಸ್ಥಾನದ ದರ್ಶನಕ್ಕೆಂದು ತೆರಳಿದ್ದ ಮಹಿಳೆಯ ಮೇಲೆ ಅಳಿವಿನಂಚಿನಲ್ಲಿರುವ ಹೈನಾ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೈನಾ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದೇ ವೇಳೆ ಅರಣ್ಯ ಇಲಾಖೆಯ ತಂಡ ಕಾಡುಪ್ರಾಣಿ ಹಿಡಿಯುವ ಕಾರ್ಯದಲ್ಲಿ ನಿರತವಾಗಿದೆ.