ವಿಡಿಯೋ: 7ನೇ ಮಹಡಿಯಿಂದ 4ನೇ ಮಹಡಿಗಿಳಿದು ಬೆಕ್ಕು ರಕ್ಷಿಸಿದ ಮಹಿಳೆ - ಬೆಕ್ಕಿನ ಪ್ರಾಣ ಉಳಿಸಲು ಭಾರಿ ಸಾಹಸ ಮಾಡಿದ ರಜನಿ ಶೆಟ್ಟಿ
🎬 Watch Now: Feature Video
ಮಂಗಳೂರು: ಬೀದಿನಾಯಿಗಳಿಗೆ ಪ್ರತಿದಿನ ಆಹಾರ ನೀಡುವ ರಜನಿ ಶೆಟ್ಟಿ ಸಂಕಷ್ಟದಲ್ಲಿದ್ದ ಬೆಕ್ಕಿನ ಪ್ರಾಣ ಉಳಿಸಿ ಗಮನ ಸೆಳೆದಿದ್ದಾರೆ. ನಗರದ ಕೊಡಿಯಾಲ್ ಗುತ್ತುವಿನ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಬೆಕ್ಕನ್ನು ಅವರು ರಕ್ಷಿಸಿದರು. ಅಂಪಾರ್ ಮಾಲ್ ಹಿಂಭಾಗದ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯ ಬಾಲ್ಕನಿಯಿಂದ ಬೆಕ್ಕು ಬಿದ್ದು, ನಾಲ್ಕನೇ ಮಹಡಿಯಲ್ಲಿ ಸಿಲುಕಿಕೊಂಡಿತ್ತು. ಈ ಮಾಹಿತಿ ತಿಳಿದ ರಜನಿ ಶೆಟ್ಟಿ ಏಳನೇ ಮಹಡಿಯಿಂದ ನಾಲ್ಕನೇ ಮಹಡಿಗೆ ಹಗ್ಗದ ಸಹಾಯದಿಂದ ಇಳಿದು ಬೆಕ್ಕನ್ನು ಬಚಾವ್ ಮಾಡಿದರು.
TAGGED:
mangaluru cat rescuing news