ಅಂಬಾಲ ವಾಯುನೆಲೆಗೆ ರಫೇಲ್ ಯುದ್ಧ ವಿಮಾನಗಳ ಆಗಮನ... ವಾಟರ್ ಸೆಲ್ಯೂಟ್ ಮೂಲಕ ಸ್ವಾಗತ! - ಅಂಬಾಲ ವಾಯುನೆಲೆ
🎬 Watch Now: Feature Video
ಹರಿಯಾಣ: ಫ್ರಾನ್ಸ್ನಿಂದ ಭಾರತದ ಹರಿಯಾಣದಲ್ಲಿರುವ ಅಂಬಾಲ ವಾಯುನೆಲೆಗೆ ಐದು ರಫೇಲ್ ಯುದ್ಧ ವಿಮಾನಗಳು ಬಂದಿಳಿದಿವೆ. ಈ ವೇಳೆ ವಾಟರ್ ಸೆಲ್ಯೂಟ್ ಮೂಲಕ ಬರಮಾಡಿಕೊಳ್ಳಲಾಗಿದೆ. ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಆರ್ಕೆಎಸ್ ಭದೌರಿ ರಫೇಲ್ ವಿಮಾನಗಳನ್ನ ಸ್ವಾಗತ ಮಾಡಿಕೊಂಡಿದ್ದಾರೆ. ಕಳೆದ ಸೋಮವಾರ ಫ್ರಾನ್ಸ್ನಿಂದ ಪ್ರಯಾಣ ಬೆಳೆಸಿದ್ದ ಜೆಟ್ಗಳು ಸುಮಾರು 7,000 ಕಿ.ಮೀ. ದೂರವನ್ನು ಒಂದೇ ದಿನದಲ್ಲಿ ಕ್ರಮಿಸಿ ನಿನ್ನೆ ಯುಎಇಗೆ ಆಗಮಿಸಿದ್ದವು. ಇಂದು ಮಧ್ಯಾಹ್ನ 3.15ಕ್ಕೆ ಹರಿಯಾಣದ ಅಂಬಾಲ ವಾಯುನೆಲೆಗೆ ಬಂದಿಳಿದಿವೆ.