ತಮಿಳುನಾಡಿನಲ್ಲಿ ವಿದ್ಯಾರ್ಥಿನಿ ಸಾವಿಗೆ ಪ್ರತೀಕಾರ, ಶಾಲೆಗೆ ನುಗ್ಗಿ ವಾಹನಗಳಿಗೆ ಬೆಂಕಿ: ವಿಡಿಯೋ - ವಿದ್ಯಾರ್ಥಿನಿ ಸಾವಿಗೆ ಹಿಂಸಾತ್ಮಕ ಪ್ರತಿಭಟನೆ
🎬 Watch Now: Feature Video
ಚೆನ್ನೈ(ತಮಿಳುನಾಡು): ಕಲ್ಲಾಕುರಿಚಿಯ ಖಾಸಗಿ ಶಾಲೆಯ ಹಾಸ್ಟೆಲ್ ಮೇಲಿಂದ ಜಿಗಿದು 12ನೇ ತರಗತಿ ವಿದ್ಯಾರ್ಥಿಯೊಬ್ಬಳು ಸಾವನ್ನಪ್ಪಿದ್ದಾಳೆ. ಘಟನೆಯಿಂದ ಆಕ್ರೋಶಗೊಂಡ ಆಕೆಯ ಪೋಷಕರು ಮತ್ತು ಬೆಂಬಲಿಗರು ನಡೆಸಿದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ. ಶಾಲೆಗೆ ನುಗ್ಗಿ ಬಸ್‌ಗಳಿಗೆ ಬೆಂಕಿ ಹಚ್ಚಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಯನ್ನು ಧ್ವಂಸ ಮಾಡಲಾಗಿದೆ. ಈ ವೇಳೆ ಕಲ್ಲು ತೂರಾಟವೂ ನಡೆದಿದ್ದು, ಪೊಲೀಸರಿಗೂ ಗಾಯವಾಗಿದೆ.