ಗೂಢಾರ್ಥದ ವಾಣಿ ನುಡಿದ ಬಬಲಾದಿ ಸ್ವಾಮೀಜಿ - Vijayapur babaladi mutya mutt
🎬 Watch Now: Feature Video
ವಿಜಯಪುರ: ಬಬಲಾದಿ ಸದಾಶಿವ ಮುತ್ಯಾಮಠದ ಪೀಠಾಧಿಪತಿ ಸಿದ್ದು ಮುತ್ಯಾ ಸ್ವಾಮೀಜಿ ಕಾಲಜ್ಞಾನದ ಭವಿಷ್ಯವಾಣಿ ನುಡಿದಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ನಡೆಯುತ್ತಿದೆ. ಈ ಹಿನ್ನೆಲೆ ಸಿದ್ದು ಮುತ್ಯಾ ಸ್ವಾಮೀಜಿ ಭವಿಷ್ಯ ವಾಣಿ ನುಡಿದಿದ್ದಾರೆ. ಮುಂಗಾರಿ ಮಳೆ ಫಲವಾಗಿ ಬೆಳೆ ಜಾಸ್ತಿ. ಹಿಂಗಾರಿ ಮಧ್ಯಮ ಫಲ. ಕಂಪ್ಲಿ ದೇಶಕ್ಕೆ ಬರ, ದೇಶದೊಳಗೆ ಹಾಹಾಕಾರ, ಕೆಟ್ಟ ಪರಿಣಾಮ. ಕೈ ಬಳೆ ಒಡೆದಾವು ಕಣ್ಣೀರ ಹರಿದಾವು ಎಂದು ಸ್ವಾಮೀಜಿ ಗೂಢಾರ್ಥದ ವಾಣಿ ನುಡಿದಿದ್ದಾರೆ.
Last Updated : Aug 12, 2022, 3:29 PM IST