ವಿದ್ಯಾರ್ಥಿಗಳನ್ನು ತುಂಬಿ ಹರಿಯುವ ನದಿ ದಾಟಿಸುತ್ತಿರುವ ಶಿಕ್ಷಕರು- ವಿಡಿಯೋ ವೈರಲ್ - ಉತ್ತರಾಖಂಡದಲ್ಲಿ ಭಾರೀ ಮಳೆ
🎬 Watch Now: Feature Video

ಉತ್ತರಕಾಶಿ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ನದಿ, ತೊರೆಗಳು ರಭಸವಾಗಿ ಹರಿಯುತ್ತಿವೆ. ಉತ್ತರಕಾಶಿ ಜಿಲ್ಲೆಯ ಬ್ರಹ್ಮಖಾಲ್ ಪ್ರದೇಶದಲ್ಲಿ ಶಿಕ್ಷಕರು ಶಾಲೆಗೆ ಹೋಗುವ ಮಕ್ಕಳನ್ನು ಪ್ರಾಣ ಪಣಕ್ಕಿಟ್ಟು ಭೋರ್ಗರೆದು ಹರಿಯುತ್ತಿರುವ ಗಡೇರಾ ನದಿಯನ್ನು ದಾಟಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಕೆಲವು ಪ್ರದೇಶಗಳಲ್ಲಿ ಮಕ್ಕಳು ಶಾಲೆ ತಲುಪಲು ಈ ರೀತಿ ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ.