ವಿಡಿಯೋ: ಏರ್ಪೋರ್ಟ್ಗೆ ತೆರಳಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ ಕೋರಿದ ಯುಎಇ ಅಧ್ಯಕ್ಷ - ಯುಎಇನಲ್ಲಿ ಮೋದಿ
🎬 Watch Now: Feature Video
ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಯುಎಇ ತಲುಪಿದ್ದಾರೆ. ಅಬು ಧಾಬಿ ಏರ್ಪೋರ್ಟ್ ತಲುಪುತ್ತಿದ್ದಂತೆ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಏರ್ಪೋರ್ಟ್ಗೆ ತೆರಳಿ ಖುದ್ದಾಗಿ ಬರಮಾಡಿಕೊಂಡರು. ಕೆಲ ತಿಂಗಳ ಹಿಂದೆ ನಿಧನರಾಗಿರುವ ಯುಎಇ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅವರ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದು, ಈ ವೇಳೆ ಉಭಯ ದೇಶದ ನಾಯಕರು ಕೆಲಹೊತ್ತು ಮಾತುಕತೆ ನಡೆಸಿದರು.