ಸಾರಿಗೆ ನೌಕರರ ಮುಷ್ಕರ: ಬೆಳಗಾವಿ ಬಸ್ ನಿಲ್ದಾಣದಲ್ಲಿ ಮಹಿಳಾ ಸಿಬ್ಬಂದಿ ಭಿಕ್ಷಾಟನೆ - staff Begs at the central bus stop of Belagavi
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9845826-210-9845826-1607694529398.jpg)
ಬೆಳಗಾವಿ: ಸಾರಿಗೆ ಸಿಬ್ಬಂದಿಗಳನ್ನು ಸರ್ಕಾರಿ ನೌಕರರನ್ನಾಗಿಸುವಂತೆ ಒತ್ತಾಯಿಸಿ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮುಂದುವರೆದಿದೆ. ಪ್ರತಿಭಟನಾಕಾರರು ಸರ್ಕಾರದ ಗಮನ ಸೆಳೆಯಲು ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡಿ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ. ರಾತ್ರಿ ಊಟಕ್ಕಾಗಿ ಬಸ್ ನಿಲ್ದಾಣದ ಆವರಣದಲ್ಲಿದ್ದ ಸಾರ್ವಜನಿಕರು, ಪೊಲೀಸರು ಹಾಗೂ ಹೋಟೆಲ್ ಮಾಲೀಕರಿಂದ ಮಹಿಳಾ ಸಿಬ್ಬಂದಿ ಹಣ ಸಂಗ್ರಹಿಸಿದರು. ಈ ವೇಳೆ ಹಣ ನೀಡುವಂತೆ ಡಿಸಿಪಿ ಬಳಿ ಸಿಬ್ಬಂದಿ ಮನವಿ ಮಾಡಿದ್ದು, ಅವರು ತನ್ನ ಬಳಿ ಹಣವಿಲ್ಲ ಎಂದು ವಾಪಸ್ ಕಳುಹಿಸಿದ ಘಟನೆ ಸಹ ನಡೆದಿದೆ.
Last Updated : Dec 11, 2020, 8:50 PM IST