ಇದ್ದಕ್ಕಿದ್ದಂತೆ ಸುಳಿದಾಡಿದ ಸುಂಟರಗಾಳಿ.. ವಿಡಿಯೋ ಸೆರೆ - ಮಧ್ಯಪ್ರದೇಶದ ಶಾಜಾಪುರದಲ್ಲಿ ಸುಂಟರಗಾಳಿ ವಿಡಿಯೋ ವೈರಲ್
🎬 Watch Now: Feature Video
ಇಲ್ಲಿನ ಶಾಜಾಪುರದಲ್ಲಿ ಜಿಲ್ಲೆಯ ಬೋಳಾಯಿ ಗ್ರಾಮದ ಸಿದ್ಧವೀರ ಹನುಮಾನ್ ದೇವಸ್ಥಾನದ ಬಳಿ ಗುರುವಾರ ಸಂಜೆ ಸುಂಟರಗಾಳಿಯೊಂದು ಎದ್ದು ಹೊಲಗಳಲ್ಲಿನ ಮರಗಳನ್ನು ನಾಶಮಾಡಿದೆ. ಇದರಿಂದ ಸ್ಥಳೀಯರು ಕೆಲಕಾಲ ಬೆಚ್ಚಿಬಿದ್ದಿದ್ದಾರೆ. ಸುಂಟರಗಾಳಿಯು ಆಕಾಶದಿಂದ ಭೂಮಿಯನ್ನು ತಲುಪಿ ಹೊಲದಲ್ಲಿದ್ದ ಸಾಕಷ್ಟು ಬೆಳೆಗಳನ್ನು ನಾಶ ಮಾಡಿರುವುದು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಘಟನೆಯ ಬಗ್ಗೆ ಹವಾಮಾನ ಇಲಾಖೆ ಇನ್ನೂ ಏನನ್ನೂ ಖಚಿತಪಡಿಸಿಲ್ಲ.