ನೆಲದ ಋಣ ಮರೆಯದ ಟಿಬೆಟಿಯನ್ನರು: ತಿರಂಗ ಹಾರಿಸಿ, ಭಾರತಾಂಬೆಗೆ ಜೈಕಾರ - hoisting the national flag
🎬 Watch Now: Feature Video
ಚಾಮರಾಜನಗರ: ಭಾರತದಲ್ಲಿ ಆಶ್ರಯ ಪಡೆದ ಟಿಬೆಟಿಯನ್ನರು ತಾವಿರುವ ನೆಲದ ಋಣ ಮರೆಯದೇ ದೇಶಾಭಿಮಾನಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪದ ಟಿಬೆಟಿಯನ್ ಕ್ಯಾಂಪಿನಲ್ಲಿ ತಿರಂಗಾ ಧ್ವಜ ಹಾರಿಸಿದ್ದಾರೆ. ತಮ್ಮ ದೇಶ ಬಿಟ್ಟು ಭಾರತದಲ್ಲಿ ಆಶ್ರಯ ಪಡೆದಿರುವ ಟಿಬೆಟಿಯನ್ನರು ಇಲ್ಲಿನ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಲ್ಲಿ ಭಾಗಿಯಾಗಿ, ಬಾವುಟ ಹಿಡಿದು ಬೈಕ್ ರ‍್ಯಾಲಿ ನಡೆಸಿದ್ದಾರೆ. ಜೊತೆಗೆ, ಸೆಟಲ್ ಮೆಂಟ್ಗಳಲ್ಲಿರುವ ಬೌದ್ಧ ಮಂದಿರದ ಮುಂಭಾಗ ತಿರಂಗಾ ಹಾರಿಸಿ ರಾಷ್ಟ್ರಗೀತೆ ಹಾಡುವ ಮೂಲಕ ತಮಗೆ ನೆಲೆ ಕೊಟ್ಟ ಭಾರತಾಂಬೆಗೆ ಜೈಕಾರ ಹಾಕಿದ್ದಾರೆ.