ಸೆಲ್ಫಿ ತೆಗೆದುಕೊಳ್ಳುವಾಗ ಹೆಚ್ಚಿದ ನೀರು, ನಡುನೀರಲ್ಲಿ ಸಿಲುಕಿದ ವಿದ್ಯಾರ್ಥಿಗಳು ... ವಿಡಿಯೋ
🎬 Watch Now: Feature Video
ಸೇಲಂ(ತಮಿಳುನಾಡು): ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗ್ತಿದೆ. ಹೀಗಾಗಿ, ತಮಿಳುನಾಡಿನ ಅತಿದೊಡ್ಡ ಅಣೆಕಟ್ಟುಗಳಲ್ಲಿ ಒಂದಾಗಿರುವ ಸೇಲಂನ ಮೆಟ್ಟೂರು ಅಣೆಕಟ್ಟು ಸಂಪೂರ್ಣವಾಗಿ ತುಂಬಿದೆ. ಹೆಚ್ಚುವರಿ ನೀರು ಈಗಾಗಲೇ ಹೊರಗಡೆ ಬಿಡಲಾಗ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾವೇರಿ ದಡದಲ್ಲಿ ವಾಸಿಸುತ್ತಿರುವ ಜನರಿಗೆ ಮುನ್ನೆಚ್ಚರಿಕೆ ಸಹ ನೀಡಲಾಗಿದೆ. ಏತನ್ಮಧ್ಯೆ, ಬೆಳಿಗ್ಗೆ ಅಣೆಕಟ್ಟಿನಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರ ಮಧ್ಯೆ ನೀರಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ನೀರಿನ ತೀವ್ರತೆ ಹೆಚ್ಚಾಗಿದ್ದು, ನಡು ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸ್ ಅಧಿಕಾರಿ, ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡ ಅವರನ್ನ ರಕ್ಷಣೆ ಮಾಡಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ. ಇವರೆಲ್ಲರೂ ಸೇಲಂ ಜಿಲ್ಲೆಯ ತಾರಮಂಗಲಂ ಮೂಲದ ಪ್ರಭು, ದಿನೇಶ್ ಮತ್ತು ರವಿ ಎಂದು ಗುರುತಿಸಲಾಗಿದೆ.