ಎನ್‌ಪಿಸಿಐಎಲ್, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟೀಸ್: ಪರಿಸರ ಪ್ರೇಮಿಗಳು ಖುಷ್ - Karavara Kaiga news
🎬 Watch Now: Feature Video

ಕಾರವಾರ ಸ್ಥಳೀಯರ ವಿರೋಧದ ನಡುವೆಯೂ ಕೈಗಾ ಅಣುವಿದ್ಯುತ್ ಕೇಂದ್ರದಲ್ಲಿ ನೂತನ ಘಟಕಗಳ ನಿರ್ಮಾಣಕ್ಕೆ ಮುಂದಾಗಿದ್ದ ಎನ್‌ಪಿಸಿಐಎಲ್‌ಗೆ ಇದೀಗ ಸಂಕಷ್ಟ ಎದುರಾಗಿದೆ. ಅಣುವಿದ್ಯುತ್ ಘಟಕಗಳಿಂದ ಪಶ್ಚಿಮ ಘಟ್ಟಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಆರೋಪ ಇದ್ದರೂ ಪರಿಸರ ಇಲಾಖೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ರಾಷ್ಟ್ರೀಯ ಹಸಿರು ಪೀಠ ಕೇಂದ್ರ ಸರ್ಕಾರ ಹಾಗೂ ಎನ್‌ಪಿಸಿಐಎಲ್ ಗೆ ನೋಟೀಸ್ ಜಾರಿ ಮಾಡಿದೆ. ಇದು ಸ್ಥಳೀಯರ ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದೆ.