ಮಧ್ಯಾಹ್ನ ಸೂಪರ್‌ಟೆಕ್ ಕಟ್ಟಡ ನೆಲಸಮ: ಸ್ಥಳಾಂತರ ಪ್ರಕ್ರಿಯೆ ಮುಕ್ತಾಯ, ಪೊಲೀಸ್ ಸರ್ಪಗಾವಲು - ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆ
🎬 Watch Now: Feature Video
ನವದೆಹಲಿ/ನೋಯ್ಡಾ: ನೊಯ್ಡಾದ ಸೂಪರ್‌ಟೆಕ್ ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಇಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಸೆಕ್ಟರ್ 93ಎ ಪ್ರದೇಶದಲ್ಲಿರುವ ಈ ಕಟ್ಟಡಗಳನ್ನು ನಿಯಮಗಳಿಗೆ ವಿರುದ್ಧವಾಗಿ ನಿರ್ಮಿಸಲಾಗಿತ್ತು. 9 ವರ್ಷಗಳ ಸುದೀರ್ಘ ಕಾನೂನು ಸಮರದ ನಂತರ ಗಗನಚುಂಬಿ ಕಟ್ಟಡಗಳನ್ನು ಕೆಡವುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸ್ಥಳದಲ್ಲಿ 560 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಮೀಸಲು ಪಡೆಗಳಿಂದ 100 ಸಿಬ್ಬಂದಿ, ಎನ್ಡಿಆರ್ಎಫ್ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಕಟ್ಟಡದ ಸುತ್ತಲಿನ ಪ್ರದೇಶದಲ್ಲಿ ಜನರನ್ನು ಈಗಾಗಲೇ ಸ್ಥಳಾಂತರಗೊಳಿಸುವ ಕೆಲಸ ಮುಗಿದಿದೆ. ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಕಂಡುಬಂದ ದೃಶ್ಯ, ಪೊಲೀಸ್ ಅಧಿಕಾರಿಯ ಪ್ರತಿಕ್ರಿಯೆ ಇಲ್ಲಿದೆ.