ಶಾಲೆಗೆ ತೆರಳಲು ಇದೇ ಮಾರ್ಗ.. ಜೀವ ಪಣಕ್ಕಿಟ್ಟು ಹಳ್ಳ ದಾಟಲೇಬೇಕು ರಾಯಚೂರಿನ ವಿದ್ಯಾರ್ಥಿಗಳು - There is no suitable road for students going from Devaragudi village to Sindhanur town
🎬 Watch Now: Feature Video
ರಾಯಚೂರು : ಜಿಲ್ಲೆಯ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದಿಂದ ಸಿಂಧನೂರು ಪಟ್ಟಣಕ್ಕೆ ತೆರಳುವ ವಿದ್ಯಾರ್ಥಿಗಳು ಪ್ಯಾಂಟ್ ಕಳಚಿ ಅರೆಬೆತ್ತಲೆಯಾಗಿ ಜೀವ ಪಣಕ್ಕಿಟ್ಟು ಶಾಲೆಗೆ ತೆರಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಸಿಂಧನೂರ ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು ಸೂಕ್ತ ರಸ್ತೆ ಇಲ್ಲದ ಕಾರಣ ಹಳ್ಳ ದಾಟಿಕೊಂಡು ಶಾಲೆಗೆ ತೆರಳಬೇಕಾಗಿದೆ. ಈ ವೇಳೆ ಕೈಯಲ್ಲಿ ಶಾಲಾ ಬ್ಯಾಗ್, ಪ್ಯಾಂಟು, ಚಪ್ಪಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ದೇವರಗುಡಿ ಗ್ರಾಮಸ್ಥರು ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಶಾಸಕರು ಮತ್ತು ಸರ್ಕಾರವನ್ನು ಸ್ಥಳೀಯರು ಒತ್ತಾಯಿಸಿದ್ದಾರೆ.