ಕಾಲ ಬದಲಾದಂತೆ ರಾವಣನೂ ಬದಲಾಗಿದ್ದಾನೆ: ಕಟ್ಟಪ್ಪನಂತೆ ನನ್ನ ಬೆನ್ನಿಗೂ ಚೂರಿ ಹಾಕಿದ್ರು.. ಉದ್ದವ್ ಠಾಕ್ರೆ ಕೆಂಡಾಮಂಡಲ - ರಾವಣ ದಹನ ಕಾರ್ಯಕ್ರಮ
🎬 Watch Now: Feature Video
ಶಿವಸೇನೆಯ ನಾಯಕ ಉದ್ದವ್ ಠಾಕ್ರೆ ಅವರು ಇಲ್ಲಿನ ಶಿವಾಜಿ ಪಾರ್ಕ್ನಲ್ಲಿ ರಾವಣ ದಹನ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸಂಪ್ರದಾಯದ ಪ್ರಕಾರ ಪ್ರತೀವರ್ಷ ರಾವಣ ದಹನ ಕಾರ್ಯಕ್ರಮ ಇರುತ್ತದೆ. ಆದರೆ, ಈ ಬಾರಿ ವಿಭಿನ್ನವಾಗಿದೆ. ಕಾಲ ಬದಲಾದಂತೆ ರಾವಣನೂ ಬದಲಾಗಿದ್ದಾನೆ. ಇಲ್ಲಿಯವರೆಗೆ ರಾವಣನಿಗೆ ಹತ್ತು ತಲೆ ಇದ್ದವು. ಈಗ ಅವನಿಗೆ ಎಷ್ಟು ತಲೆಗಳಿವೆ? ಈಗ ಅವನು 50 ಪಟ್ಟು ದ್ರೋಹವನ್ನು ಮಾಡುತ್ತಿದ್ದಾನೆ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ನೀಡಿದರು. ನಾನು ಆಸ್ಪತ್ರೆಯಲ್ಲಿದ್ದಾಗ ರಾಜ್ಯದ ಜವಾಬ್ದಾರಿ ಕೊಟ್ಟವರು ಕಟ್ಟಪ್ಪನ ರೀತಿಯಲ್ಲಿ ದ್ರೋಹ ಬಗೆದಿದ್ದಕ್ಕೆ ನನಗೆ ಕೋಪ ಹಾಗೂ ಸಿಟ್ಟು ಬರಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಆಸ್ಪತ್ರೆಯಿಂದ ಮತ್ತೆ ಮರಳಿ ಬರುವುದಿಲ್ಲ ಎಂದು ತಿಳಿದುಕೊಂಡಿದ್ದರು ಎಂದು ಸಿಟ್ಟು ಹೊರಹಾಕಿದರು. ಈ ನಡುವೆ ಉದ್ದವ್ ಠಾಕ್ರೆ ಅವರ ಆರೋಪಕ್ಕೆ ಸಿಎಂ ಏಕನಾಥ ಶಿಂದೆ ತಿರುಗೇಟು ನೀಡಿದ್ದಾರೆ. ಕಟ್ಟಪ್ಪ ಗೆ ಆತ್ಮಗೌರವ ಇದೆ. ನಿಮ್ಮ ಹಾಗೆ ಅವರು ದ್ವಿಮುಖ ನೀತಿ ಅನುಸರಿಸುತ್ತಿರಲಿಲ್ಲ. ಇದು ನಿಮ್ಮ (ಉದ್ಧವ್ ಠಾಕ್ರೆ) ಖಾಸಗಿ ಲಿಮಿಟೆಡ್ ಕಂಪನಿಯಲ್ಲ. ಶಿವಸೇನೆಯು ಶಿವಸೈನಿಕರದ್ದು, ಅದಕ್ಕಾಗಿ ತಮ್ಮ ಬೆವರು ಹರಿಸಿದ್ದಾರೆ. ಪಾಲುದಾರಿಕೆ ಮತ್ತು ಮಾರಾಟ ಮಾಡಿದ ನಿಮ್ಮಂತಹ ಜನರದ್ದಲ್ಲ ಎಂದು ಶಿಂದೆ ಉದ್ದವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ.
Last Updated : Oct 5, 2022, 10:06 PM IST