ನೂಪುರ್ ಬಂಧನಕ್ಕೆ ಆಗ್ರಹಿಸಿ ದೆಹಲಿ ಜಾಮಾ ಮಸೀದಿಯೆದುರು ಮುಸ್ಲಿಮರ ಪ್ರತಿಭಟನೆ - ನೂಪುರ್ ಆಕ್ಷೇಪಾರ್ಹ ಹೇಳಿಕೆ
🎬 Watch Now: Feature Video
ಪ್ರವಾದಿ ಮಹಮ್ಮದ್ ಪೈಗಂಬರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಪಕ್ಷದಿಂದ ಉಚ್ಛಾಟಿತರಾದ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ಮುಸ್ಲಿಂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶುಕ್ರವಾರದ ನಮಾಜ್ ಬಳಿಕ ದೆಹಲಿಯ ಜಾಮಾ ಮಸೀದಿಯೆದುರು ಸೇರಿದ ಮುಸ್ಲಿಮರು ನೂಪುರ್ ವಿರುದ್ಧ ಘೋಷಣೆಗಳನ್ನು ಕೂಗಿ, ಬಂಧನಕ್ಕೆ ಒತ್ತಾಯಿಸಿದರು. ಇನ್ನೊಂದೆಡೆ, ಬೆಳಗಾವಿಯ ನಡುರಸ್ತೆಯಲ್ಲೇ ಕಿಡಿಗೇಡಿಗಳು ಬಿಜೆಪಿ ನಾಯಕಿಯ ಪ್ರತಿಕೃತಿ ನೇತು ಹಾಕಿರುವ ಘಟನೆ ನಡೆದಿದೆ.