ಕೋಳಿಗಳ ಕಳೇಬರಕ್ಕೆ ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು - Etv bharat kannada
🎬 Watch Now: Feature Video
ಕೃಷ್ಣ(ಆಂಧ್ರ ಪ್ರದೇಶ): ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪುವ ಜನರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸುವುದನ್ನು ಕೇಳಿದ್ದೇವೆ. ಆದರೆ, ಕೃಷ್ಣ ಜಿಲ್ಲೆಯ ಮೋಪಿದೇವಿ ಮಂಡಲದಲ್ಲಿ ಸತ್ತ ಕೋಳಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವ್ಯಕ್ತಿಯೋರ್ವ ತಾನು ಸಾಕಿರುವ ಕೋಳಿಗಳಿಗೆ ಯಾರೋ ವಿಷ ಬೆರೆಸಿ ಸಾಯಿಸಿದ್ದಾರೆಂದು ಆರೋಪಿಸಿದ್ದ. ಹೀಗಾಗಿ, ಮನೆಯಲ್ಲಿರುವ 10 ಕೋಳಿಗಳು ಸತ್ತಿವೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಶು ವೈದ್ಯರ ಮೂಲಕ ಅವುಗಳ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದರು. ಪರೀಕ್ಷೆಯ ವರದಿ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.