ಎಚ್ಚರ: ಐಟಿ ಅಧಿಕಾರಿಗಳ ಹೆಸರಿನಲ್ಲಿ ನಿಮ್ಮ ಮನೆಗೂ ಬರಬಹುದು ಕಳ್ಳರ ಗ್ಯಾಂಗ್ - ನಿಮ್ಮ ಮನೆಗೂ ಬರಬಹುದು ಕಳ್ಳರ ಗ್ಯಾಂಗ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16215772-thumbnail-3x2-wdfdfdfd.jpg)
ಮುಂಬೈ(ಮಹಾರಾಷ್ಟ್ರ): ಆದಾಯ ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡು ಕಳ್ಳರ ಗ್ಯಾಂಗ್ವೊಂದು ಮುಂಬೈನ ವಿವಿಧ ನಿವಾಸಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಐಟಿ ಅಧಿಕಾರಿಗಳು ಎಂದು ಹೇಳಿಕೊಂಡು ಮನೆಗಳ ಮೇಲೆ ದಾಳಿ ನಡೆಸಿರುವ ಗ್ಯಾಂಗ್ ಅಪಾರ ಪ್ರಮಾಣದ ಹಣ, ನಗದು ದೋಚಿಕೊಂಡು ಪರಾರಿಯಾಗ್ತಿದ್ದರು. ಖಚಿತ ಮಾಹಿತಿ ಮೇರೆಗೆ ನಾಲ್ವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಜನರಿಗೆ ಎಚ್ಚರಿಕೆ ಸಹ ನೀಡಿದ್ದಾರೆ.