ಅದ್ಧೂರಿ ಮೊಹರಂ ಆಚರಣೆ : ಭಕ್ತರಿಂದ ಕೆಂಡ ಸೇವೆ, ಗಮನಸೆಳೆದ ಪಂಜಾ ಮೆರವಣಿಗೆ - ಈಟಿವಿ ಭಾರತ್ ಕನ್ನಡ
🎬 Watch Now: Feature Video

ಹಾವೇರಿ : ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೋಲಿ, ಪಂಜಾಗಳ ಮೆರವಣಿಗೆ ನಡೆಸಲಾಯಿತು. ಹಿಂದೂ-ಮುಸ್ಲಿಂ ಬಾಂಧವರು ಎಲ್ಲರೂ ಒಂದಾಗಿ ಭಾವೈಕ್ಯತೆಯ ಪ್ರತೀಕವಾಗಿ ಮೊಹರಂ ಹಬ್ಬವನ್ನು ಆಚರಿಸಿದರು. ಡೋಲಿ, ಪಂಜಾಗಳನ್ನು ಹೊತ್ತ ಹಿಂದೂ ಮುಸ್ಲಿಂರು ಕೆಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು. ಮೆರವಣಿಗೆ ಮುಂದೆ ಹುಲಿ ವೇಷಧಾರಿಗಳ ಕುಣಿತ ಜೋರಾಗಿತ್ತು. ಗ್ರಾಮದ ಎಲ್ಲ ಜನರು ಭಾವೈಕ್ಯತೆಯ ಪ್ರತೀಕವಾಗಿ ಮೊಹರಂ ಹಬ್ಬದಲ್ಲಿ ಪಾಲ್ಗೊಂಡರು. ಜನರು ಡೋಲಿ, ಪಂಜಾಗಳಿಗೆ ಸಕ್ಕರೆ ನೈವೈದ್ಯ ಮಾಡಿದರು.