ಹಾವೇರಿ: ಬೈಕ್ ಸ್ಕಿಡ್​ ಆಗಿ ಧರ್ಮಾ ನದಿಗೆ ಬಿದ್ದು ತಾಯಿ-ಮಗ ನೀರುಪಾಲು

By

Published : Dec 9, 2020, 10:21 PM IST

thumbnail

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಧರ್ಮಾ ನದಿಯಲ್ಲಿ ದಾರುಣ ಘಟನೆ ನಡೆದಿದೆ. ಧರ್ಮಾ ನದಿಗೆ ಕಟ್ಟಲಾಗಿದ್ದ ಬಾಂದಾರದ ಮೇಲೆ ಬೈಕ್‌ನಲ್ಲಿ ಬರುತ್ತಿದ್ದ ತಾಯಿ-ಮಗ ನೀರುಪಾಲಾಗಿದ್ದಾರೆ. ಮೃತರನ್ನು ಕಾಡಶೆಟ್ಟಿಹಳ್ಳಿ ಗ್ರಾಮದ 45 ವರ್ಷದ ಚನ್ನವ್ವ ಮತ್ತು ಮಗ 21 ವರ್ಷದ ಬಸವರಾಜ್ ಕುಂದೂರು ಎಂದು ಗುರುತಿಸಲಾಗಿದೆ. ಬಸವರಾಜ್ ಮತ್ತು ಚನ್ನವ್ವ ಮಂಗಳವಾರ ಹಾವೇರಿಗೆ ಬಂದಿದ್ದರು. ಹಾವೇರಿಯಿಂದ ಕಾಡಶೆಟ್ಟಿಹಳ್ಳಿ ಹೋಗುತ್ತಿದ್ದಾಗ ದಾರಿ ಹತ್ತಿರವಾಗುತ್ತೆ ಎಂದು ಬಾಂದಾರ ಮಾರ್ಗವಾಗಿ ಸಂಚರಿಸಿದ್ದಾರೆ. ಈ ವೇಳೆ ಬೈಕ್ ಸ್ಕಿಡ್​ ಆಗಿ ಬಾಂದಾರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.