ತನ್ನ ಕಾಲಿಗೆ ಕಡಿದ ಹಾವನ್ನೇ ಕಚ್ಚಿ ಸಾಯಿಸಿದ ಭೂಪ: ಕೊರಳಿಗೆ ಸುತ್ತಿಕೊಂಡು ಊರೆಲ್ಲ ಸುತ್ತಾಟ.. ವಿಡಿಯೋ
🎬 Watch Now: Feature Video
ಬಾಲಸೋರ್ (ಒಡಿಶಾ): ಸತ್ತ ನಾಗರ ಹಾವೊಂದನ್ನು ವ್ಯಕ್ತಿಯೊಬ್ಬ ತನ್ನ ಕೊರಳಿಗೆ ಸುತ್ತಿಕೊಂಡು ಊರೆಲ್ಲ ಸೈಕಲ್ನಲ್ಲಿ ಸಂಚರಿಸುತ್ತಿರುವ ವಿಡಿಯೋವೊಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ವೈರಲ್ ಆಗಲಿದೆ. ಈ ವ್ಯಕ್ತಿಯನ್ನು ದರ್ದಾ ಗ್ರಾಮದ ಸಲೀಂ ಖಾನ್ ಎಂದು ಗುರುತಿಸಲಾಗಿದೆ. ಬುಧವಾರ ಹೊಲದಲ್ಲಿ ನಾನು ಹುಲ್ಲು ಕೊಯ್ಯುತ್ತಿದ್ದಾಗ ಹಾವು ನನ್ನ ಕಾಲಿಗೆ ಕಚ್ಚಿತ್ತು. ಆಗ ನಾನು ಆ ಹಾವನ್ನು ಹಿಡಿದುಕೊಂಡು ಅದರ ಕುತ್ತಿಗೆಗೆ ಕಚ್ಚಿದೆ. ಇದರಿಂದ ಅದು ಸತ್ತು ಹೋಗಿದೆ ಎಂದು ವಿಡಿಯೋದಲ್ಲಿ ಆ ವ್ಯಕ್ತಿ ಹೇಳಿಕೊಂಡಿದ್ದಾನೆ.