ಲೂಧಿಯಾನದಲ್ಲಿ ಮಾದಕವ್ಯಸನಿ ಕಾನ್ಸ್​ಟೇಬಲ್​​​ ವಿಡಿಯೋ ವೈರಲ್ - ಲೂಧಿಯಾನದಲ್ಲಿ ಮಾದಕವ್ಯಸನಿ ಕಾನ್ಸ್​ಟೇಬಲ್

🎬 Watch Now: Feature Video

thumbnail

By

Published : Sep 8, 2022, 11:04 PM IST

ಸಾರ್ವಜನಿಕರು ಹಾಗೂ ಪೊಲೀಸ್​ ಕಾನ್​ಸ್ಟೇಬಲ್ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಪಂಜಾಬ್​ನ ಲೂಧಿಯಾನದಲ್ಲಿ ನಡೆದಿದೆ. ಘಟನೆಯ ಪ್ರಕಾರ, ಯುವಕನೊಬ್ಬ ನಾಯಿ ಕಡಿತಕ್ಕೆ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದಾಗ ಅವರನ್ನು ಅಡ್ಡಗಟ್ಟಿ ಬೈಕ್​ನ ಡಾಕ್ಯುಮೆಂಟ್ಸ್​ಗಳನ್ನು ಕಾನ್ಸ್​​ಟೇಬಲ್​​ ಕೇಳಿದ್ದಾರೆ. ಅಲ್ಲದೇ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದರಿಂದ ಕುಪಿತಗೊಂಡ ಸಾರ್ವಜನಿಕರು ಅವರ ನಾಮಫಲಕವನ್ನು ಕೇಳಿದ್ದಾರೆ. ಇದಕ್ಕೆ ಕಾನ್ಸ್​ಟೇಬಲ್​ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಂತರ ಅವರು ಮಾದಕ ದ್ರವ್ಯ ಸೇವಿಸಿದ್ದರು ಎಂಬುದು ತಿಳಿದು ಬಂದಿದ್ದರಿಂದ ಹತ್ತಿರ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಬಗ್ಗೆ ಎಸಿಪಿ ಸೆಂಟ್ರಲ್ ರಮಣದೀಪ್ ಭುಲ್ಲಾರ್ ಅವರು ಪ್ರತಿಕ್ರಿಯಿಸಿದ್ದು, ಕಾನ್ಸ್​ಟೇಬಲ್​​ ಮಾದಕ ವ್ಯಸನಿಗಳಾಗಿದ್ದು, ವೈದ್ಯಕೀಯ ತಪಾಸಣೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.