'ಈ ಸಲ ಕಪ್ ನಮ್ದೆ' ಎಂದು ಕುಣಿದ ಯುವಕರ ಬೆನ್ನು ತಟ್ಟಿದ ಹ್ಯಾಟ್ರಿಕ್ ಹೀರೋ - Doddaballapura news
🎬 Watch Now: Feature Video
ದೊಡ್ಡಬಳ್ಳಾಪುರ: ಐಪಿಎಲ್ ಅಂದ್ರೆ ಹಬ್ಬ ಮಾಡೋ ಎಷ್ಟೋ ಮಂದಿ ಅದರ ಬಗ್ಗೆ ಪಂಚಿಂಗ್ ಡೈಲಾಗ್ಸ್, ಟ್ರೋಲ್ಸ್, ಕವನ ಬರೆದರೆ, ದೊಡ್ಡಬಳ್ಳಾಪುರದ ಯುವಕರು ಅವರೆಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಡ್ರೀಮ್ ಮಾರಿಯರ್ಸ್ ಅರ್ಪಿಸುವ 'ಈ ಸಲ ಕಪ್ ನಮ್ದೆ' ಎಂಬ ವಿಡಿಯೋ ಸಾಂಗ್ ತಯಾರಾಗಿದ್ದು, ಅದರ ನಿರ್ದೇಶನ ಮತ್ತು ಕೊರಿಯೋಗ್ರಾಫಿಯನ್ನು ಪ್ರಸಿ ಮಾಸ್ಟರ್ ಮಾಡಿದ್ದಾರೆ. ನಿರ್ಮಾಪಕರಾಗಿ ಅಪ್ಪಣ್ಣ ಬಿ.ಎಸ್. ಮತ್ತು ಬಾಲಾಂಜಿನಪ್ಪ ಹಣ ಕೊಟ್ಟು ಹುಡುಗರ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡಿದ್ದಾರೆ. ಇದಕ್ಕೆ ಪ್ರತಾಪ್ ಸಾಹಿತ್ಯ ಬರೆದಿದ್ದು, ಅವರೇ ಹಾಡಿದ್ದಾರೆ. ಆರ್ಸಿಬಿ ತಂಡದ ರಿಸರ್ವ್ ಆಟಗಾರನಾಗಿ ಆಯ್ಕೆಯಾಗಿದ್ದ ಮಹೇಶ್ ಕುಮಾರ್ ಸಾಂಗ್ನಲ್ಲಿ ಪ್ರಮುಖ ಡ್ಯಾನ್ಸರ್ ಆಗಿ ಗಮನ ಸೆಳೆದಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ವಿಡಿಯೋ ನೋಡಿ ಯುವಕರ ಬೆನ್ನು ತಟ್ಟಿದ್ದಾರೆ.