ಗ್ರಹಣದ ನಡುವೆಯೂ ದರ್ಶನ ನೀಡಲಿದ್ದಾನೆ ಗೋಕರ್ಣದ ಮಹಾಬಲೇಶ್ವರ! - Gokarna of Karavara
🎬 Watch Now: Feature Video
ಕಾರವಾರ: ಐತಿಹಾಸಿಕ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ನಾಳೆ ನಡೆಯಲಿರುವ ಖಂಡಗ್ರಾಸ ಚೂಡಾಮಣಿ ಸೂರ್ಯಗ್ರಹಣ ನಡುವೆಯೂ ದೇವರ ದರ್ಶನಕ್ಕೆ ವಿಶೇಷ ಅವಕಾಶ ನೀಡಲಾಗಿದೆ. ಲಾಕ್ಡೌನ್ ಸಡಿಲಿಕೆ ಬಳಿಕ ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ 9.30ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ನಾಳೆ ಸೂರ್ಯ ಗ್ರಹಣ ಹಿನ್ನೆಲೆ ಬೆಳಗ್ಗೆ 10.4ಕ್ಕೆ ಪ್ರಾರಂಭಗೊಂಡು ಮಧ್ಯಾಹ್ನ 1.23ಕ್ಕೆ ಮೋಕ್ಷ ಪಡೆಯಲಿದೆ. ಗ್ರಹಣ ಕಾಲದಿಂದ ಮೋಕ್ಷ ಕಾಲದವರೆಗೆ ಮಹಾಬಲೇಶ್ವರನಿಗೆ ವಿಶೇಷ ಗಂಗಾಜಲಾಭಿಷೇಕ ನಡೆಯಲಿದ್ದು, ಗ್ರಹಣ ಮೋಕ್ಷದ ಬಳಿಕ ಕ್ಷೇತ್ರ ಶುಚಿಗೊಳಿಸಿ, ಮಹಾಪೂಜೆ ನಡೆಯಲಿದೆ.