'ಎಸ್‌ಡಿಪಿಐ ಧರ್ಮ ವಿರೋಧಿ ಕೃತ್ಯ ಎಸಗಿಲ್ಲ; ಕೋಮು ಗಲಭೆಯನ್ನೂ ಸೃಷ್ಟಿಸಿಲ್ಲ, ಬ್ಯಾನ್ ಏಕೆ?' - No communal act has been done for 13 years
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15129663-thumbnail-3x2-bng.jpg)
ಮೈಸೂರು: 13 ವರ್ಷಗಳಲ್ಲಿ ಎಸ್.ಡಿ.ಪಿ.ಐ ಪಕ್ಷವು ಯಾವುದೇ ಧರ್ಮ ವಿರೋಧಿ, ಕೋಮು ವಿರೋಧಿ ಭಾಷಣ ಮಾಡಿಲ್ಲ. ಕೋಮು ಗಲಭೆಯನ್ನೂ ಸೃಷ್ಟಿ ಮಾಡಿಲ್ಲ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ಕೈತಪ್ಪಿ ಹೋಗಿದೆ. ಧರ್ಮಗಳ ನಡುವೆ, ಕೋಮುಗಳ ನಡುವೆ ದ್ವೇಷ ಹರಡುವ ಕೆಲಸ ಕೆಲವು ವ್ಯಕ್ತಿಗಳಿಂದ ನಡೆಯುತ್ತಿದೆ. ಹೀಗಿರುವಾಗ ಎಸ್.ಡಿ.ಪಿ.ಐ ಅನ್ನು ಏಕೆ ನಿಷೇಧಿಸಬೇಕು ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸಿದರು.