VIDEO: ಬರೋಬ್ಬರಿ 100 ಅಡಿ ಎತ್ತರದ ಜಲಪಾತದಿಂದ ಜಿಗಿದ ಯುವತಿ! - 100 ಅಡಿ ಎತ್ತರದ ಜಲಪಾತದಿಂದ ಜಿಗಿದ ಯುವತಿ
🎬 Watch Now: Feature Video
ಜಗದಲ್ಪುರ(ಛತ್ತೀಸ್ಗಢ): ಇಲ್ಲಿನ ಚಿತ್ರಕೂಟ್ ಜಲಪಾತದಲ್ಲಿ ಯುವತಿಯೋರ್ವಳು ಬರೋಬ್ಬರಿ 100 ಅಡಿ ಎತ್ತರದ ಜಲಪಾತದಿಂದ ಕೆಳಗೆ ಜಿಗಿದಿದ್ದಾಳೆ. ಇಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಅದರ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಜಲಪಾತದ ತುದಿಯಲ್ಲಿ ನಿಂತುಕೊಂಡಿರುವ ಹುಡುಗಿ, ಏಕಾಏಕಿ ಅಲ್ಲಿಂದ ಕೆಳಗೆ ಜಿಗಿದಿದ್ದಾಳೆ. ನೀರಿನ ರಭಸಕ್ಕೆ ಆಕೆ ಕೊಚ್ಚಿಕೊಡು ಹೋಗಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಶೋಧಕಾರ್ಯ ನಡೆಸಿರುವ ಸಿಬ್ಬಂದಿಗೆ ಇಲ್ಲಿಯವರೆಗೆ ಆಕೆಯ ಮೃತದೇಹ ಪತ್ತೆಯಾಗಿಲ್ಲ.