ಬ್ರೇಕ್ ಫೇಲ್ ಆಗಿ ವಾಹನಗಳ ಮೇಲೆ ಹರಿದು ತಡೆಗೋಡೆಗೆ ಗುದ್ದಿದ ಬಸ್: ಭಯಾನಕ ವಿಡಿಯೋ - bus brake failure accident
🎬 Watch Now: Feature Video
ಚಲಿಸುತ್ತಿದ್ದ ಬಸ್ನ ಬ್ರೇಕ್ ವಿಫಲವಾಗಿ ಎದುರಿಗೆ ಬಂದ ಆಟೋ, ವಾಹನದ ಮೇಲೆ ಹರಿದು ತಡೆಗೋಡೆಗೆ ಗುದ್ದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮುಂಬೈನ ಸಂತೋಷ್ ನಗರದಿಂದ ಕುರ್ಲಾ ಕಡೆಗೆ ಹೋಗುತ್ತಿದ್ದ ಬಸ್ಸಿನ ಬ್ರೇಕ್ ವೈಫಲ್ಯವಾಗಿದೆ. ಈ ವೇಳೆ ಚಾಲಕ ಹರಸಾಹಸಪಟ್ಟು ಬಸ್ ನಿಲ್ಲಿಸಲು ಮುಂದಾದಾಗ ಬಸ್ ಯರ್ರಾಬಿರ್ರಿ ಚಲಿಸಿದೆ. ಬಸ್ ಎರಡು ಆಟೋಗಳಿಗೆ ಗುದ್ದಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಿಂಡೋಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.