ಕುಡಿಯುವ ನೀರಿಗೆ ವಿಷ ಹಾಕ್ತಿದ್ಯಾ ಬಿಬಿಎಂಪಿ? ಪಾಲಿಕೆ ವಿರುದ್ಧ ರೈತರ ಪ್ರತಿಭಟನೆ - ದೊಡ್ಡಬಳ್ಳಾಪುರ ರೈತರ ಪ್ರತಿಭಟನೆ
🎬 Watch Now: Feature Video

ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುತ್ತಿರುವ ರಾಶಿ ರಾಶಿ ಕಸ ವಿಲೇವಾರಿ ಮಾಡಲಾಗದೆ ಬಿಬಿಎಂಪಿ ರಾಜಧಾನಿ ಹೊರವಲಯದ ಹಳ್ಳಿಗಳಲ್ಲಿ ಕಸ ತುಂಬಿಸುತ್ತಿದೆ. ದೊಡ್ಡಬಳ್ಳಾಪುರ ತಾಲೂಕಿನ ಗುಂಡ್ಲಹಳ್ಳಿಯ ಟೆರ್ರಾ ಫಾರ್ಮ್ ನಲ್ಲಿಯೂ ಬಿಬಿಎಂಪಿ ಕಸ ವಿಲೇವಾರಿ ಮಾಡಲು ಶುರುಮಾಡಿತ್ತು. ಕಸದ ವಿರುದ್ಧ ಅಹೋರಾತ್ರಿ ಪ್ರತಿಭಟನೆ ನಡೆಸಿದ ರೈತರು ಟೆರ್ರಾ ಫಾರ್ಮ್ ಮುಚ್ಚುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ಹೆಚ್ಚಾದ ಹಿನ್ನೆಲೆ ಟೆರ್ರಾ ಫಾರ್ಮ್ ಘಟಕವನ್ನು ಮತ್ತೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಇದರ ವಿರುದ್ಧ ರೈತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದಾರೆ.