ಗುಮ್ಲಾ: ಕೇಂದ್ರ ಸಚಿವ ಅರ್ಜುನ್ ಮುಂಡಾ ಸಭೆ ನಡೆಸುತ್ತಿದ್ದಾಗಲೇ ಹೊತ್ತಿಕೊಂಡ ಬೆಂಕಿ - ಸಭೆ ನಡೆಸುತ್ತಿರುವಾಗ ಹೊತ್ತಿಕೊಂಡ ಬೆಂಕಿ
🎬 Watch Now: Feature Video
ಗುಮ್ಲಾ (ಜಾರ್ಖಂಡ್): ಇಲ್ಲಿನ ವಿಕಾಸ್ ಭವನದಲ್ಲಿ ದಿಶಾ ಸಭೆ ನಡೆಯುತ್ತಿರುವಾಗ ಅಚಾನಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಇದು ಕೆಲ ಸಮಯ ಆತಂಕಕ್ಕೆ ಕಾರಣವಾಯಿತು. ಈ ಸಭೆಯಲ್ಲಿ ಕೇಂದ್ರ ಸಚಿವ ಅರ್ಜುನ್ ಮುಂಡಾ, ಲೋಹರ್ದಗಾ ಸಂಸದ ಸುದರ್ಶನ ಭಗತ್, ರಾಜ್ಯಸಭಾ ಸಂಸದ ಸಮೀರ್ ಓರಾನ್ ಮತ್ತು ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭಾಂಗಣದ ಫ್ಯಾನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಭದ್ರತಾ ಸಿಬ್ಬಂದಿ ಹಾಗೂ ಕೆಲ ಅಧಿಕಾರಿಗಳು ಫ್ಯಾನ್ ಕೆಳಗಿಳಿಸಿ ನೀರು ಸುರಿದು, ಬೆಂಕಿಯನ್ನು ನಂದಿಸಿದರು.