ಚಿಕ್ಕಮಗಳೂರಲ್ಲಿ ಕಾರು ಅಟ್ಟಾಡಿಸಿದ ಕಾಡಾನೆ - Elephant attack on omni car
🎬 Watch Now: Feature Video

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ನಡುವೆ ಕಾಡಾನೆಗಳ ಪುಂಡಾಟವೂ ಮುಂದುವರೆದಿದೆ. ಸಲಗವೊಂದು ಓಮಿನಿ ಕಾರನ್ನು ಅಟ್ಟಾಡಿಸಿದ ಘಟನೆ ಮೂಡಿಗೆರೆ ತಾಲೂಕಿನ ದೇವರಮನೆ ಬಳಿ ನಡೆಯಿತು. ಆನೆ ಕಂಡ ಚಾಲಕ ಪ್ರಾಣಾಪಾಯದಿಂದ ಪಾರಾಗಲು ಯತ್ನಿಸಿದ್ದು, ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಚರಂಡಿಗೆ ನುಗ್ಗಿದೆ. ಆಗ ಚಾಲಕ ಸೇರಿ ಮೂವರು ಕಾರಿನಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ.