ಚಿಕ್ಕಮಗಳೂರು: ಕಾಂತಾರ ಶೈಲಿಯಲ್ಲಿ ಕುಡುಕನ ಬೊಬ್ಬೆ... ವಿಡಿಯೋ! - ನಟ ರಿಷಬ್ ಶೆಟ್ಟಿ
🎬 Watch Now: Feature Video

ಕಾಂತಾರ ಸಿನಿಮಾಗೆ ಫಿದಾ ಆಗಿ ಕುಡುಕನೊಬ್ಬ ವಿಚಿತ್ರವಾಗಿ ಬೊಬ್ಬೆ ಹೊಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ. ನಗರದ ಜೆ ಎಂ ಜೆ ಚಿತ್ರ ಮಂದಿರದಲ್ಲಿ ಸಿನಿಮಾ ನೋಡಿ ಬಸ್ ಸ್ಟ್ಯಾಂಡ್ ಸೇರಿದಂತೆ ಪಟ್ಟಣದ ತುಂಬೆಲ್ಲಾ ಕುಡುಕ ಮಹಾಶಯ ಓಡಾಡಿ ವಿಚಿತ್ರವಾಗಿ ಕೂಗಿಕೊಂಡಿದ್ದಾನೆ. ನಟ ರಿಷಬ್ ಶೆಟ್ಟಿಯನ್ನೇ ತನ್ನ ಮೈ ಮೇಲೆ ಅವಾಹನೆ ಮಾಡಿಕೊಂಡಂತೆ ಕೂಗಿದ್ದಾನೆ. ಕಾಂತಾರಾ ಸಿನಿಮಾದ ಹಲವು ಸನ್ನಿವೇಶಗಳಲ್ಲಿ ರಿಷಬ್ ಶೆಟ್ಟಿ ಕೂಗಿ ಕೊಳ್ಳುವ ರೀತಿಯಲ್ಲಿ ಈ ವ್ಯಕ್ತಿಯೂ ಕುಡಿದ ಮತ್ತಿನಲ್ಲಿ ಅಬ್ಬರಿಸಿರುವುದನ್ನ ನೋಡಿ ಸಾರ್ವಜನಿಕರು ದಂಗಾಗಿ ಹೋಗಿದ್ದಾರೆ. ಒಟ್ಟಿನಲ್ಲಿ ಕಾಂತಾರ ಸಿನಿಮಾ ಎಲ್ಲರನ್ನೂ ಹೇಗೆ ಕಾಡಿದೆ ಅನ್ನೋದಕ್ಕೆ ಇದೊಂದು ಒಳ್ಳೆ ಉದಾಹರಣೆಯೇ ಸರಿ.
Last Updated : Oct 12, 2022, 8:41 PM IST