ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಪಾನಮತ್ತ ಬೈಕ್ ಸವಾರನ ಕಿರಿಕ್ - ಡ್ರಿಂಕ್ ಅ್ಯಂಡ್ ಡ್ರೈವ್ ತಪಾಸಣೆ
🎬 Watch Now: Feature Video
ಬೆಂಗಳೂರು : ತಪಾಸಣೆಗಾಗಿ ತಡೆದ ಪೊಲೀಸರೊಂದಿಗೆ ಪಾನಮತ್ತ ವ್ಯಕ್ತಿಯೊಬ್ಬ ಕಿರಿಕಿರಿ ಮಾಡಿದ ಘಟನೆ ತಡರಾತ್ರಿ ಹಲಸೂರು ಗೇಟ್ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ಕಿರಿಕ್ ಮಾಡಿಕೊಂಡವನನ್ನು ಸಂಭಾಳಿಸಲಾಗದೇ ಪೊಲೀಸರೇ ಹೈರಾಣಾಗಿದ್ದಾರೆ. ಎಂದಿನಂತೆ ಮಂಧ್ಯರಾತ್ರಿ 12ಗಂಟೆಗೆ ಹಲಸೂರು ಗೇಟ್ ಸಂಚಾರ ಠಾಣಾ ಪೊಲೀಸರು ಡ್ರಿಂಕ್ ಅ್ಯಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದಾಗ ಪಾನಮತ್ತನಾಗಿ ಬೈಕ್ ಚಲಾಯಿಸಿಕೊಂಡು ಬಂದಿದ್ದ ಬೈಕ್ ಸವಾರನನ್ನು ತಡೆದಿದ್ದರು. ಗಾಡಿ ಸೈಡಿಗೆ ನಿಲ್ಲಿಸು ಎಂದಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ ಆರಂಭಿಸಿದ ಆತ ಅವಾಚ್ಯವಾಗಿ ನಿಂದಿಸಲಾರಂಭಿಸಿದ್ದಾನೆ. ಸದ್ಯ ಬೈಕ್ ವಶಪಡಿಸಿಕೊಂಡಿರುವ ಪೊಲೀಸರು ಸವಾರನಿಗೆ ದಂಡ ವಿಧಿಸಿ ಬಿಟ್ಟು ಕಳಿಸಿದ್ದಾರೆ.