ಹೆಚ್ಚಿನ ಜಿಮ್, ಹೃದಯಸಂಬಂಧಿ ಕಾಯಿಲೆ ಬಗ್ಗೆ ಡಾ. ಮಂಜುನಾಥ್ ಸಲಹೆ - ಕಾರ್ಡಿಯಾಕೆಲ್ ಚೆಕ್ಅಪ್
🎬 Watch Now: Feature Video
ಮೈಸೂರು: ಇತ್ತೀಚೆಗೆ ಜಿಮ್ ಮಾಡುವಾಗ ಅಥವಾ ಜಿಮ್ ನಂತರ ಕೆಲ ಹೊತ್ತಲ್ಲೇ ಹೃದಯಾಘಾತ ಉಂಟಾಗಿ ಮೃತಪಡುತ್ತಿರುವ ಅನೇಕ ಪ್ರಕರಣಗಳು ನಡೆದಿವೆ. ಜಿಮ್ ಮಾಡುವಾಗ ವಹಿಸಬೇಕಾದ ಕೆಲ ಮುನ್ನೆಚ್ಚರಿಕೆ ಬಗ್ಗೆ ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಮಾತನಾಡಿದ್ದಾರೆ. ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಬಹಳ ಮುನ್ನೆಚ್ಚರಿಕೆ ವಹಿಸಬೇಕು. ಏಕಾಏಕಿ ಜಾಸ್ತಿ ವ್ಯಾಯಾಮ ಮಾಡಬಾರದು, ಇದರಲ್ಲೂ ಇತಿಮಿತಿ ಇರಬೇಕು. ಕ್ರಮೇಣ ಹೆಚ್ಚಿನ ಭಾರದೊಂದಿಗೆ ವ್ಯಾಯಾಮ ರೂಢಿಸಿಕೊಳ್ಳಬೇಕು. ಹೆಚ್ಚಿನ ವ್ಯಾಯಾಮಕ್ಕೂ ಮುನ್ನ ಕಾರ್ಡಿಯಾಕೆಲ್ ಚೆಕ್ಅಪ್ ಮಾಡಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಎಷ್ಟೋ ಜನರಿಗೆ ಗೊತ್ತಿಲ್ಲದ ರೀತಿಯಲ್ಲಿ ತೊಂದರೆ ಇರುತ್ತದೆ, ಹುಟ್ಟಿನಿಂದಲೇ ಹೃದಯಸಂಬಂಧಿ ಕಾಯಿಲೆ ಇರುತ್ತದೆ. ಹೀಗಾಗಿ ಬಹಳ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಡಾ.ಸಿ.ಎನ್ ಮಂಜುನಾಥ್ ಸಲಹೆ ನೀಡಿದರು.
Last Updated : Sep 9, 2022, 5:18 PM IST