ಬಳ್ಳಾರಿ ನಗರದಲ್ಲಿ ಮೊಸಳೆ ಸೆರೆ.. ನಿಟ್ಟಸಿರು ಬಿಟ್ಟ ಜನತೆ - ಮೊಸಳೆ ಸೆರೆ
🎬 Watch Now: Feature Video
ಬಳ್ಳಾರಿ: ಇಲ್ಲಿನ ಜಾಗೃತಿ ನಗರದ ಹೊಂಡದಲ್ಲಿ ಈಚೆಗೆ ಜನರಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆಹಿಡಿದು ತುಂಗಭದ್ರಾ ಜಲಾಶಯಕ್ಕೆ ಬಿಟ್ಟು ಬಂದಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಜಾಗೃತಿ ನಗರ, ಭತ್ರಿ ಪ್ರದೇಶ ಮತ್ತು ಟೀಚರ್ಸ್ ಕಾಲೋನಿ ಬಳಿಯ ಖಾಲಿ ನಿವೇಶನದಲ್ಲಿ ನೀರು ಸಂಗ್ರಹಗೊಂಡಿತ್ತು. ಈ ಪ್ರದೇಶದಲ್ಲಿ ಕಳೆದ 2-3 ತಿಂಗಳಿಂದ ಎರಡು ಮೊಸಳೆಗಳು ಕಾಣಿಸಿಕೊಂಡಿದ್ದವು. ಈಗ ಒಂದನ್ನು ಸೆರೆಹಿಡಿದಿರುವುದರಿಂದ ಜನರು ನಿಟ್ಟಸಿರು ಬಿಟ್ಟಿದ್ದಾರೆ. ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹಿಂದೂರಾವ್ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ ಕಳೆದ ನಾಲ್ಕು ದಿನಗಳಿಂದ ಮೊಸಳೆ ಹಿಡಿಯುವ ಕಾರ್ಯಕ್ಕೆ ವಲಯ ಅರಣ್ಯ ರಕ್ಷಣಾಧಿಕಾರಿ ರಾಘವೇಂದ್ರಯ್ಯ ಆರ್ ಹೆಚ್ ಅವರ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.