ಧಾವಂತದಲ್ಲಿ ಚಲಿಸುತ್ತಿದ್ದ ರೈಲಿನಡಿ ಸಿಲುಕುತ್ತಿದ್ದ ಮಹಿಳೆಯ ಜೀವ ಉಳಿಸಿದ ಕಾನ್ಸ್ಟೇಬಲ್ - ಮಹಿಳೆ ಜೀವ ಉಳಿಸಿದ ಕಾನ್ಸ್ಟೇಬಲ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15228693-thumbnail-3x2-yy.jpg)
ಜೋಧ್‌ಪುರ: ಮಹಿಳೆಯೋರ್ವಳು ಚಲಿಸುತ್ತಿರುವ ರೈಲನ್ನು ಹತ್ತಲು ಯತ್ನಿಸಿದಾಗ ಕಾಲು ಜಾರಿ ರೈಲಿನ ಕೆಳಗೆ ಸಿಲುಕುತ್ತಿದ್ದಳು. ಈ ಕ್ಷಣದಲ್ಲಿ ದೇವರಂತೆ ಬಂದ ರೈಲ್ವೆ ಕಾನ್ಸ್ಟೇಬಲ್ ಒಬ್ಬರು ಆಕೆಯನ್ನು ಬಚಾವ್ ಮಾಡಿ ಪ್ರಾಣ ಉಳಿಸಿದ ಘಟನೆ ಜೋಧ್‌ಪುರ ನಿಲ್ದಾಣದಲ್ಲಿ ನಡೆದಿದೆ. ಜಮ್ಮು- ತಾವಿ ಎಕ್ಸ್ಪ್ರೆಸ್ ರೈಲು ಜೋಧ್‌ಪುರ ನಿಲ್ದಾಣದಲ್ಲಿ ನಿಧಾನವಾಗಿ ಹೊರಟಿದ್ದಾಗ ರೈಲನ್ನು ಏರಲು ಮುಂದಾದ ಮಹಿಳೆ ಕೈ ಜಾರಿ ಫ್ಲಾಟ್ಫಾರ್ಮ್ ಮತ್ತು ರೈಲಿನ ಮಧ್ಯೆ ಬಿದ್ದಿದ್ದಾಳೆ. ಇದನ್ನು ಕಂಡ ಪೊಲೀಸ್ ಸಜನ್ರಾಯ್ ಎಂಬುವರು ತಕ್ಷಣವೇ ಆಕೆಯ ಕೈ ಹಿಡಿದು ಎಳೆದುಕೊಂಡು ರಕ್ಷಿಸಿಸಿದ್ದಾರೆ.