ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ: ವಿದ್ಯಾರ್ಥಿಗಳ ಪುಂಡಾಟಕ್ಕೆ ಕಿಟಕಿ ಗಾಜು ಪುಡಿಪುಡಿ - ಎಕ್ಸ್ ಪ್ರೆಸ್ ರೈಲಿಗೆ ಕಲ್ಲು ತೂರಾಟ

🎬 Watch Now: Feature Video

thumbnail

By

Published : Apr 12, 2022, 8:22 PM IST

ತಮಿಳುನಾಡು(ಚೆನ್ನೈ): ಚೆನ್ನೈ ಸ್ಟೇಟ್ ಕಾಲೇಜ್​ನ ವಿದ್ಯಾರ್ಥಿಗಳು ಚೆನ್ನೈ ಸೆಂಟ್ರಲ್​ ಸ್ಟೇಷನ್​​ನಿಂದ ತಿರುಪತಿಗೆ ತೆರಳುತ್ತಿದ್ದ ಎಕ್ಸ್​​ಪ್ರೆಸ್​ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ರೈಲು ಪೆರಂಬಲೂರು ನಿಲ್ದಾಣದಿಂದ ಚಲಿಸುತ್ತಿದ್ದ ವೇಳೆ ಪ್ರಯಾಣಿಕರಿಗೆ ವಿದ್ಯಾರ್ಥಿಗಳು ತೊಂದರೆ ನೀಡಲು ಶುರು ಮಾಡಿದ್ದಾರೆ. ಈ ವೇಳೆ ಪರಸ್ಪರ ವಾಗ್ವಾದ ನಡೆದಿದೆ. ತಕ್ಷಣವೇ ರೈಲಿನಿಂದ ಕೆಳಗಿಳಿದಿರುವ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 15 ವಿದ್ಯಾರ್ಥಿಗಳನ್ನು ಬಂಧನ ಮಾಡುವಲ್ಲಿ ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.