ಮರಕ್ಕೆ ಕಟ್ಟಿ ಯುವಕನನ್ನು ತಾಲಿಬಾನ್ ರೀತಿ ಶಿಕ್ಷಿಸಿದ ದುಷ್ಕರ್ಮಿಗಳು.. ವಿಡಿಯೋ - ಈಟಿವಿ ಭಾರತ ಕರ್ನಾಟಕ

🎬 Watch Now: Feature Video

thumbnail

By

Published : Sep 3, 2022, 1:11 PM IST

ಸಿದ್ಧಾರ್ಥನಗರ(ಉತ್ತರ ಪ್ರದೇಶ): ಯುವಕನೋರ್ವನನ್ನ ಮರಕ್ಕೆ ಕಟ್ಟಿ ಹಾಕಿರುವ ದುಷ್ಕರ್ಮಿಗಳು ದೊಣ್ಣೆಯಿಂದ ಥಳಿಸಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ. ಘಟನೆ ದೃಶ್ಯಾವಳಿ ಸದ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಭವಾನಿಗಂಜ್​​ ಪೊಲೀಸ್ ಠಾಣಾ ವ್ಯಾಪ್ತಿಯ ಗುಲ್ರಿಹಾವಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವಕನನ್ನು ತಾಲಿಬಾನಿಗಳ ರೀತಿ ಶಿಕ್ಷಿಸಿರುವ ದುಷ್ಕರ್ಮಿಗಳು ತೀವ್ರವಾಗಿ ಥಳಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದು ಗೊತ್ತಾಗಿಲ್ಲ. ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದರ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಸುರೇಶ್​ ಚಂದ್​ ರಾವತ್​ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.