ವಿಡಿಯೋ: ಪ್ರವಾಹ ವೀಕ್ಷಣೆಗೆ ಬಂದ ಬಿಜೆಪಿ ಶಾಸಕನನ್ನ ಹೆಗಲ ಮೇಲೆ ಹೊತ್ತೊಯ್ದ ರಕ್ಷಣಾ ಸಿಬ್ಬಂದಿ! - ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15332065-thumbnail-3x2-wdfdfd.jpg)
ಗುವಾಹಟಿ(ಅಸ್ಸೋಂ): ಅಸ್ಸೋಂನಲ್ಲಿ ಕಳೆದ ಕೆಲ ದಿನಗಳಿಂದ ಭೀಕರ ಮಳೆಯಾಗುತ್ತಿದ್ದು, ಕೆಲ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಮಧ್ಯೆ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಲು ಆಗಮಿಸಿದ್ದ ಬಿಜೆಪಿ ಶಾಸಕ ಸಿಬು ಮಿಶ್ರಾ ರಕ್ಷಣಾ ಸಿಬ್ಬಂದಿ ಹೆಗಲ ಮೇಲೆ ಹತ್ತಿ, ದೋಣಿ ತಲುಪಿದ್ದಾರೆ. ಇದರ ವಿಡಿಯೋ ತುಣುಕ ಇದೀಗ ಸಿಕ್ಕಾಪಟ್ಟಿ ವೈರಲ್ ಆಗ್ತಿದೆ. ಜೊತೆಗೆ ಶಾಸಕನ ವರ್ತನೆಗೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗ್ತಿದೆ. ಅಸ್ಸೋಂನ ಹೊಜೈ ಜಿಲ್ಲೆಗೆ ಮಿಶ್ರಾ ಭೇಟಿ ನೀಡಿದ್ದರು. ಈ ವೇಳೆ ರಕ್ಷಣಾ ಸಿಬ್ಬಂದಿ ದೋಣಿ ನಿಂತಿದ್ದ ಸ್ಥಳದವರೆಗೂ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.