ವಿರಾಟ್ ವಿಶ್ವದರ್ಜೆ ಕ್ರಿಕೆಟಿಗ, ದೇಶಕ್ಕಾಗಿ ಪಂದ್ಯ ಗೆಲ್ಲುವ ಹಸಿವಿನ್ನೂ ಇದೆ: ಕೆ ಎಲ್ ರಾಹುಲ್ - ಏಷ್ಯಾಕಪ್ 2022
🎬 Watch Now: Feature Video
ಕಳಪೆ ಬ್ಯಾಟಿಂಗ್ನಿಂದ ತೀವ್ರ ಟೀಕೆಗೊಳಗಾಗಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಏಷ್ಯಾ ಕಪ್ನಲ್ಲಿ ಮಿಂಚು ಹರಿಸುವ ನಿರೀಕ್ಷೆ ಇದೆ. ಈ ಕುರಿತ ಪ್ರಶ್ನೆಗಳಿಗೆ ಟೀಂ ಇಂಡಿಯಾ ಉಪನಾಯಕ ಕೆ ಎಲ್ ರಾಹುಲ್ ಉತ್ತರಿಸಿ, ನಾನು ಗಾಯಗೊಂಡು ಎರಡು ತಿಂಗಳ ಕಾಲ ಮನೆಯಲ್ಲಿದ್ದಾಗ ಕೊಹ್ಲಿ ಬ್ಯಾಟಿಂಗ್ ಅನ್ನು ಟಿವಿಯಲ್ಲಿ ನೋಡಿದ್ದೇನೆ. ಅವರು ಫಾರ್ಮ್ನಿಂದ ಹೊರಬಿದ್ದಿದ್ದಾರೆಂದು ನನಗನ್ನಿಸುತ್ತಿಲ್ಲ. ಕೆಲವೊಮ್ಮೆ ವಿಕೆಟ್ ಒಪ್ಪಿಸಿದ್ದಾರೆ. ಅವರ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳಿಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ. ಅದು ಆಟಗಾರನ ಮೇಲೆ ಯಾವುದೇ ಪರಿಣಾಮ ಬೀರದು. ಅವರು ಸ್ವಲ್ಪ ವಿರಾಮ ಪಡೆದುಕೊಂಡಿದ್ದಾರೆ. ಆತ ಓರ್ವ ವಿಶ್ವದರ್ಜೆಯ ಆಟಗಾರ. ದೇಶಕ್ಕಾಗಿ ಪಂದ್ಯ ಗೆಲ್ಲಬೇಕೆಂಬ ಹಸಿವೂ ಇನ್ನೂ ಅವರಲ್ಲಿದೆ ಎಂದರು.