ಎರಡು ವರ್ಷಗಳ ನಂತರ ಅದ್ಧೂರಿ ಓಣಂ ಆಚರಣೆ.. ಕಳೆಗಟ್ಟಿದ ಸಂಭ್ರಮ - ಸುಂದರವಾದ ಪೂಕ್ಕಳಂ
🎬 Watch Now: Feature Video
ತಿರುವನಂತಪುರಂ: ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಮಂಕಾಗಿದ್ದ ಓಣಂ ಆಚರಣೆ ಅನ್ನು ಈ ವರ್ಷ ಕೇರಳದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಓಣಂ ಎಂಬುದು ಅಸುರ (ರಾಕ್ಷಸ) ರಾಜ ಮಹಾಬಲಿಯ ಪುನರಾಗಮನದ ಹಬ್ಬ. ಮನೆಗಳಲ್ಲಿ ಸುಂದರವಾದ ಪೂಕ್ಕಳಂ ತಯಾರಿಸಿ, ಹೊಸ ಉಡುಪುಗಳು, ಮನೆಯಂಗಳದಲ್ಲಿ ಎತ್ತರದ ಉಯ್ಯಾಲೆ ಕಟ್ಟಿ, ಬಾಳೆ ಎಲೆಯಲ್ಲಿ ಸಾಂಪ್ರದಾಯಿಕ ಸಸ್ಯಾಹಾರಿ ಖಾದ್ಯಗಳನ್ನು ಬಡಿಸಿ ಸಂಭ್ರಮದಿಂದ ಆಚರಿಸಲಾಗಿದೆ. ತಮ್ಮ ಸಂಬಂಧಿಕರನ್ನು, ಸ್ನೇಹಿತರನ್ನು ಭೇಟಿ ಮಾಡಿ ಸಂತೋಷವನ್ನು ಹೆಚ್ಚಿಸಿಕೊಂಡಿದ್ದಾರೆ. ಓಣಂ ಹಬ್ಬದ ಅಂಗವಾದ ಸಾಂಪ್ರದಾಯಿಕ ಕಲಾ ಪ್ರಕಾರಗಳು ಮತ್ತು ಆಟಗಳ ಪ್ರದರ್ಶನವೂ ಇತ್ತು.