ಒಂದೇ ನಿಮಿಷದಲ್ಲಿ 150 ತೆಂಗಿನಕಾಯಿ ಒಡೆದು ದಾಖಲೆ ಬರೆದ ಕಾರ್ಮಿಕ: ವಿಡಿಯೋ - 150 ತೆಂಗಿನಕಾಯಿ ಒಡೆದು ದಾಖಲೆ ಬರೆದ ಕಾರ್ಮಿಕ

🎬 Watch Now: Feature Video

thumbnail

By

Published : Apr 20, 2022, 7:38 PM IST

ರೋಹ್ಟಕ್​(ಹರಿಯಾಣ): ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಧರ್ಮೇಂದ್ರ ಒಂದೇ ನಿಮಿಷದಲ್ಲಿ 150 ತೆಂಗಿನಕಾಯಿಗಳನ್ನು ಒಂದೇ ಕೈಯಿಂದ ಒಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾನೆ. ಗಿನ್ನಿಸ್ ಬುಕ್ ಆಫ್​ ವರ್ಲ್ಡ್​ ರೆಕಾರ್ಡ್​​ನಲ್ಲಿ ತಮ್ಮ ಹೆಸರು ದಾಖಲು ಮಾಡುವ ಉದ್ದೇಶದಿಂದ ಇಷ್ಟೊಂದು ತೆಂಗಿನಕಾಯಿಗಳನ್ನು ಈತ ಒಡೆದಿದ್ದಾನೆ.ಕೋವಿಡ್​ ಸಮಯದಲ್ಲಿ ಲಾಕ್​ಡೌನ್​ ಆಗಿದ್ದಾಗ ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳಬೇಕಾಯ್ತು. ಈ ಸಂದರ್ಭದಲ್ಲಿ ಯೂಟ್ಯೂಬ್​ನಲ್ಲಿ ತೆಂಗಿನಕಾಯಿ ಒಡೆಯುವ ವಿಡಿಯೋ ನೋಡುವ ಹವ್ಯಾಸ ಹುಟ್ಟುಕೊಂಡಿತು. ತದನಂತರ ಮನೆಯಲ್ಲೇ ತೆಂಗಿನಕಾಯಿ ಒಡೆಯುವ ಅಭ್ಯಾಸ ಆರಂಭಿಸಿದ್ದಾಗಿ ಧರ್ಮೇಂದ್ರ ತಿಳಿಸಿದ್ದಾನೆ. ಈ ಹಿಂದೆ ಕೇರಳದ ಯುವಕನೋರ್ವ ನಿಮಿಷದಲ್ಲಿ 122 ತೆಂಗಿನಕಾಯಿ ಒಡೆದು ದಾಖಲೆ ನಿರ್ಮಿಸಿದ್ದ. ಇದೀಗ ಆ ದಾಖಲೆ ಬ್ರೇಕ್ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.