ಮಗನೊಂದಿಗೆ ರೈಲು ಹಳಿಗೆ ಹಾರಿದ ತಂದೆ ಸಾವು, ಮಗ ಪ್ರಾಣಾಪಾಯದಿಂದ ಪಾರು - ವಿಠಲವಾಡಿ ರೈಲ್ವೆ ನಿಲ್ದಾಣದಲ್ಲಿ ಅವಘಡ
🎬 Watch Now: Feature Video
ಥಾಣೆ(ಮಹಾರಾಷ್ಟ್ರ): ತಂದೆಯೋರ್ವ ಮಗನೊಂದಿಗೆ ರೈಲು ಹಳಿ ಮೇಲೆ ಹಾರಿ ಸಾವನ್ನಪ್ಪಿದ್ದು, ಮಗ ಪ್ರಾಣಾಪಾಯದಿಂದ ಪಾರಾಗಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಥಾಣೆ ಸಮೀಪದ ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ನಡೆದಿದೆ. ಪ್ರಮೋದ್ ಎಂಬುವವರು ತನ್ನ 6 ವರ್ಷದ ಮಗನೊಂದಿಗೆ ಮುಂಬೈನಿಂದ ಪುಣೆಗೆ ತೆರಳುತ್ತಿದ್ದ ಡೆಕ್ಕನ್ ಎಕ್ಸ್‌ಪ್ರೆಸ್ ರೈಲು ಬರುತ್ತಿದ್ದಂತೆ ಹಳಿಗೆ ಹಾರಿದರು. ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated : Feb 3, 2023, 8:16 PM IST