ಕೊಡಗಿನಲ್ಲಿ ಯುವ ದಸರಾ ಸಂಭ್ರಮ: ತುಂತುರು ಮಳೆಯಲ್ಲಿ ಹುಚ್ಚೆದ್ದು ಕುಣಿದ ಯುವ ಸಮೂಹ - ಯುವ ದಸರಾ ಸಂಭ್ರಮ
🎬 Watch Now: Feature Video
ಕೊಡಗು: ದಿನ ಕಳೆದಂತೆ ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವ ರಂಗೇರುತ್ತಿದೆ. ಸಾಗರೋಪಾದಿಯಲ್ಲಿ ಮಂಜಿನ ನಗರಿಯತ್ತ ಜನರ ದಂಡು ಹರಿದು ಬರುತ್ತಿದೆ. ಅದರಲ್ಲೂ ಮಡಿಕೇರಿಯ ವೆಧರ್‌ನಲ್ಲಿ ಇಂದು ನಡೆದ ಯುವ ದಸರಾವಂತೂ ಟುಮಾರೋ ಲ್ಯಾಂಡ್ ಅನ್ನು ನೆನಪಿಸುವಂತಿತ್ತು. ಕಲರ್‌ಫುಲ್ ವೇದಿಕೆಯಲ್ಲಿ ಕಲಾವಿದರು ನಡೆಸಿಕೊಟ್ಟ ನೃತ್ಯಗಳು ಎಲ್ಲರ ಮನಸೂರೆಗೊಂಡವು. ಮಂಜು ಮುಸುಕಿದ ಚಳಿಯ ವಾತಾವರಣ, ತುಂತುರು ಮಳೆಯ ನಡುವೆ ನೆರೆದಿದ್ದ ಯುವ ಸಮೂಹವನ್ನು ಡಿಜೆ ಸೌಂಡ್ಸ್ಗೆ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಇನ್ನು ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಎಲ್ಲರೂ ಹೆಜ್ಜೆ ಹಾಕಿ ಸಖತ್ ಎಂಜಾಯ್ ಮಾಡಿದರು.