ETV Bharat / bharat

ಮನಮೋಹನ್ ಸಿಂಗ್‌ ಕುರಿತು ನೀವು ಓದಲೇಬೇಕಾದ 6 ಪ್ರಮುಖ ಪುಸ್ತಕಗಳಿವು - BOOKS ABOUT DR MANMOHAN SINGH

ಮಾಜಿ ಪ್ರಧಾನಿ ದಿ.ಡಾ.ಮನಮೋಹನ್ ಸಿಂಗ್ ಅವರ ರಾಜಕೀಯ ಮತ್ತು ವೈಯಕ್ತಿಕ ಜೀವನದ ಕುರಿತು ಬೆಳಕು ಚೆಲ್ಲುವ ಪುಸ್ತಕಗಳು ಇಲ್ಲಿವೆ.

ಡಾ.ಮನಮೋಹನ್ ಸಿಂಗ್
ಡಾ.ಮನಮೋಹನ್ ಸಿಂಗ್ (ANI)
author img

By ETV Bharat Karnataka Team

Published : 16 hours ago

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಗುರುವಾರ ರಾತ್ರಿ ಇಹಲೋಕ ತ್ಯಜಿಸಿದ್ದು, ಗಣ್ಯಾತಿಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಡಾ.ಸಿಂಗ್ ಅವರು ಪ್ರಧಾನಮಂತ್ರಿ ಮತ್ತು ಪ್ರಖ್ಯಾತ ಅರ್ಥಶಾಸ್ತ್ರಜ್ಞ ಮಾತ್ರವಲ್ಲದೇ ಲೇಖಕರೂ ಆಗಿದ್ದರು ಎಂಬುದು ವಿಶೇಷ. ಡಾ.ಸಿಂಗ್ ಅವರ ಬರಹಗಳು ಭಾರತದ ಆರ್ಥಿಕ ನೀತಿಗಳು, ಭೌಗೋಳಿಕ ರಾಜಕೀಯ ಹಾಗೂ ತಮ್ಮ ವೈಯಕ್ತಿಕ ಜೀವನದ ಒಳನೋಟವನ್ನು ತೆರೆದಿಡುತ್ತವೆ.

1.ಇಂಡಿಯಾಸ್ ಎಕ್ಸ್​ಪೋರ್ಟ್ ಟ್ರೆಂಡ್ಸ್ ಆ್ಯಂಡ್ ಪ್ರಾಸ್ಪೆಕ್ಟ್ಸ್ ಫಾರ್ ಸೆಲ್ಫ್-ಸಸ್ಟೈನ್​​ ಗ್ರೋಥ್: 1964ರಲ್ಲಿ ಪ್ರಕಟವಾದ ಈ ಕೃತಿಯು ಭಾರತದ ಆಂತರಿಕ ವ್ಯಾಪಾರ ನೀತಿಗಳನ್ನು ಟೀಕಿಸುತ್ತದೆ ಮತ್ತು ರಫ್ತು ಆಧರಿತ ಬೆಳವಣಿಗೆಯನ್ನು ಪ್ರತಿಪಾದಿಸುತ್ತದೆ. ಈ ಪುಸ್ತಕದಲ್ಲಿ ಡಾ.ಸಿಂಗ್, ದೇಶದ ರಫ್ತು ಕಾರ್ಯಕ್ಷಮತೆಗೆ ಅಡ್ಡಿಯಾದ ಸವಾಲುಗಳನ್ನು ವಿಶ್ಲೇಷಿಸಿದ್ದಾರೆ. ಸ್ವಯಂ-ಸುಸ್ಥಿರ ಬೆಳವಣಿಗೆ ಸಾಧಿಸಲು ಕೆಲವು ನೀತಿಗಳನ್ನು ಶಿಫಾರಸು ಮಾಡಿದ್ದಾರೆ.

2.ಚೇಂಜಿಂಗ್​ ಇಂಡಿಯಾ: 2018ರಲ್ಲಿ ಬಿಡುಗಡೆಯಾದ ಐದು ಸಂಪುಟಗಳ ಸಂಗ್ರಹವು ಭಾರತದ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯ ಕುರಿತು ಡಾ.ಸಿಂಗ್ ಅವರ ಆಲೋಚನೆಗಳನ್ನು ಪ್ರತಿಬಿಂಬಿಸುತ್ತದೆ. ಈ ಸಂಗ್ರಹವು ಆರ್ಥಿಕ ಸುಧಾರಣೆಗಳು, ಆಡಳಿತ ಮತ್ತು ಜಾಗತಿಕ ವ್ಯವಹಾರಗಳಲ್ಲಿ ಭಾರತದ ಪಾತ್ರ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿದೆ.

3.ಇಂಡಿಯಾಸ್ ಎಕನಾಮಿಕ್ ರೆಫಾರ್ಮ್ಸ್ ಆ್ಯಂಡ್ ಡೆವಲಪ್​ಮೆಂಟ್​: ಎಸ್ಸಯ್ಸ್ ಫಾರ್ ಮನಮೋಹನ್ ಸಿಂಗ್: ಇಶರ್ ಜಡ್ಜ್ ಅಹ್ಲುವಾಲಿಯಾ ಮತ್ತು ಐ.ಎಂ.ಡಿ.ಲಿಟಲ್ ಸಂಪಾದಿಸಿದ ಹಾಗೂ 1998ರಲ್ಲಿ ಪ್ರಕಟವಾದ ಈ ಸಂಕಲನವು ಭಾರತದ ಆರ್ಥಿಕ ಸುಧಾರಣೆಗಳಿಗೆ ಡಾ.ಸಿಂಗ್ ಅವರ ಕೊಡುಗೆಗಳನ್ನು ಶ್ಲಾಘಿಸಿರುವ ಪ್ರಮುಖ ಅರ್ಥಶಾಸ್ತ್ರಜ್ಞರ ಪ್ರಬಂಧಗಳನ್ನು ಒಳಗೊಂಡಿದೆ. ಡಾ.ಸಿಂಗ್ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿನ ಸುಧಾರಣೆಗಳ ಪರಿಣಾಮ ಮತ್ತು ಭವಿಷ್ಯದ ದಿಕ್ಕನ್ನು ಪ್ರತಿಬಿಂಬಿಸುವ ಆರ್ಥಿಕ ನೀತಿಯ ವಿವಿಧ ಅಂಶಗಳನ್ನು ಪ್ರಬಂಧಗಳು ಚರ್ಚಿಸುತ್ತವೆ.

4.ಸ್ಟ್ರೀಕ್ಟ್ಲಿ ಪರ್ಸನಲ್: ಗುರುಶರಣ್ ಮತ್ತು ಮನಮೋಹನ್: 2017ರಲ್ಲಿ ಪ್ರಕಟವಾದ ಈ ಪುಸ್ತಕ ಡಾ.ಸಿಂಗ್ ಅವರ ವೈಯಕ್ತಿಕ ಜೀವನ ಕುರಿತ ಮಾಹಿತಿಯನ್ನು ಮಗಳು ದಮನ್ ಸಿಂಗ್ ಹಂಚಿಕೊಂಡಿದ್ದಾರೆ. ತನ್ನ ಪೋಷಕರೊಂದಿಗೆ ನಡೆಸಿದ ಸಂಭಾಷಣೆಗಳನ್ನು ಇಲ್ಲಿ ಹೇಳಿರುವ ದಮನ್, ಪೋಷಕರು ಮತ್ತು ತನ್ನ ಹಾಗೂ ಇಬ್ಬರು ಸಹೋದರಿಯರಾದ ಉಪಿಂದರ್ ಮತ್ತು ಅಮೃತ್ ಅವರ ಭಾವಚಿತ್ರವನ್ನು ಬಿಡಿಸಿದ್ದಾರೆ. ಸ್ಟ್ರೀಕ್ಟ್ಲಿ ಪರ್ಸನಲ್ ಪುಸ್ತಕ ರಾಜಕಾರಣಿಯ ಹಿಂದಿನ ಮಾನವೀಯ ಕಥೆಯನ್ನು ಬೆಳಕಿಗೆ ತರುತ್ತದೆ.

5.ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ದಿ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಮನಮೋಹನ್ ಸಿಂಗ್: 2014ರಲ್ಲಿ ಸಂಜಯ ಬಾರು ಅವರು ಬರೆದ ಈ ಆತ್ಮಚರಿತ್ರೆ 2004ರಿಂದ 2008ರವರೆಗೆ ಡಾ.ಸಿಂಗ್ ಪ್ರಧಾನಿಯಾಗಿದ್ದ ಅವಧಿಯ ಬಗ್ಗೆ ಒಳನೋಟ ಹೊಂದಿದೆ. ಬಾರು ಅವರು ಡಾ.ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿ ಕೆಲಸ ಸಲ್ಲಿಸಿದ್ದರು. ಇವರು ಡಾ.ಸಿಂಗ್​ ಅವರ ನಾಯಕತ್ವದ ಸಂಕೀರ್ಣತೆಗಳು, ಕಾಂಗ್ರೆಸ್ ಪಕ್ಷದೊಂದಿಗಿನ ಅವರ ಸಂಬಂಧ ಮತ್ತು ರಾಜಕೀಯ ರಂಗದಲ್ಲಿ ಎದುರಿಸಿದ ಸವಾಲುಗಳ ಕುರಿತು ಬೆಳಕು ಚೆಲ್ಲಿದ್ದಾರೆ.

6.ಮನಮೋಹನೊಮಿಕ್ಸ್:​ ಜರ್ನಿ ಟು ಸೌತ್ ಬ್ಲಾಕ್ - ಲೈಫ್ ಆನ್​ ಇಂಡಿಯನ್ ಪ್ರೈಮ್ ಮಿನಿಸ್ಟರ್: ಈ ಪುಸ್ತಕವನ್ನು ಪತ್ರಕರ್ತ ವಿವೇಕ್ ಗಾರ್ಗ್ ರವೀಶ್ ಮಿಶ್ರಾ ಬರೆದಿದ್ದಾರೆ. 2008ರಲ್ಲಿ ಪ್ರಕಟವಾದ ಪುಸ್ತಕವು ಡಾ.ಸಿಂಗ್ ಅವರ ಆರ್ಥಿಕ ತತ್ವಗಳು ಮತ್ತು ನೀತಿಗಳನ್ನು ಪರಿಶೀಲಿಸುತ್ತದೆ. ಇದು ಆರ್ಥಿಕ ಸವಾಲುಗಳಿಗೆ ಅವರು ತೆಗೆದುಕೊಂಡ ನಿರ್ಣಯಗಳು ಮತ್ತು ಪ್ರಧಾನಿಯಾಗಿ ಭಾರತದ ಅಭಿವೃದ್ಧಿಯ ಬಗ್ಗೆ ಅವರ ದೃಷ್ಟಿಕೋನದ ವಿಶ್ಲೇಷಣೆಯ ಕುರಿತು ಮಾಹಿತಿ ನೀಡುತ್ತದೆ.

ಇದನ್ನೂ ಓದಿ: ಆರ್ಥಿಕ ತಜ್ಞನ ರಾಜಕೀಯ ಹಾದಿ: 33 ವರ್ಷ ರಾಜ್ಯಸಭಾ ಸದಸ್ಯ, ಮೊದಲ ಲೋಕಸಭಾ ಚುನಾವಣೆಯಲ್ಲೇ ಸೋತಿದ್ದೇಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.