ಕೃಷ್ಣೆಯ ನೀರಲ್ಲಿ ಸೆಲ್ಫಿ: ಅಪಾಯ ಲೆಕ್ಕಿಸದೆ ಯುವಕರ ಹುಚ್ವಾಟ - selfie craze
🎬 Watch Now: Feature Video
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹರಿಬಿಡಲಾಗಿದೆ. ಈ ಹಿನ್ನಱಲೆಯಲ್ಲಿ ಕೌಳೂರ ಸೇತುವೆ ಸಂಪೂರ್ಣವಾಗಿ ಜಲಾವೃತ್ತವಾಗಿದ್ದು, ಸೇತುವೆ ಬಳಿ ಯುವಕರು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಓರ್ವ ವ್ಯಕ್ತಿ ಕೃಷ್ಣಾ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರೂ, ಯುವಕರಿಗೆ ಅಪಾಯದ ಬಗ್ಗೆ ಇನ್ನೂ ಕೂಡ ಅರಿವು ಮೂಡಿಲ್ಲ.