ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನೆಲೆ ಕನಕಗಿರಿಯಲ್ಲಿ ಹಾಲಿನೋಕುಳಿಯಾಡಿದ ಯುವಕರು - ಕನಕಗಿರಿಯಲ್ಲಿ ಹಾಲಿನೋಕುಳಿಯಾಡಿದ ಯುವಕರು
🎬 Watch Now: Feature Video

ಕೊಪ್ಪಳ: ಶ್ರೀ ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆ ಯಾದವ ಸಮುದಾಯದ ಯುವಕರು ಹಾಲುಗಂಬವೇರಿ ಹಾಲಿನೋಕುಳಿಯಾಡಿದರು. ಜಿಲ್ಲೆಯ ಕನಕಗಿರಿಯಲ್ಲಿರುವ ಶ್ರೀ ಕನಕಾಚಲ ಲಕ್ಷ್ಮಿನರಸಿಂಹ ದೇವಾಲಯದ ಆವರಣದಲ್ಲಿ ಹಾಲಿನೋಕುಳಿ ನಡೆಯಿತು. ಒಂಭತ್ತು ವರ್ಷದ ಬಳಿಕ ಹಾಲುಗಂಬವನ್ನು ಯುವಕರು ಪೂರ್ಣವಾಗಿ ಏರಿದರು. ಮೀಸಲಿಟ್ಟ ಹಾಲು, ಮೊಸರು, ತುಪ್ಪದ ಓಕುಳಿಯಾಡಿದರು. ಈ ಬಾರಿ ಯುವಕರು ಕಂಬ ಪೂರ್ಣವಾಗಿ ಏರಿದ್ದರಿಂದ ಮಳೆ, ಬೆಳೆ ಚೆನ್ನಾಗಿ ಆಗಲಿದೆ ಎಂಬ ನಂಬಿಕೆ ಜನರಲ್ಲಿದೆ.